ಬೆಂಗಳೂರು: ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ. ಇದೇ ತಿಂಗಳು 4ರಂದು ಅರೆಸ್ಟ್ ವಾರಂಟ್ ಜಾರಿಯಾಗಿದೆ.
ರಾಬಿನ್ ಉತ್ತಪ್ಪ ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಇಪಿಎಫ್ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಎಂಬವರು ಪೊಲೀಸರಿಗೆ ಪತ್ರ ಬರೆದಿದ್ದಾರೆ.
ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಇಪಿಎಫ್ ಹಣ ಪಾವತಿಸಿಲ್ಲ. ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿಕೊಂಡು, ಉದ್ಯೋಗಿಗಳ ಖಾತೆಗೆ ಹಾಕದೇ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಒಟ್ಟಾರೆ, 23 ಲಕ್ಷ ರೂ. ವಂಚಿಸಲಾಗಿದೆ ಎಂಬ ಆರೋಪ ಸೆಂಚುರೀಸ್ ಲೈಫ್ – ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕೇಳಿ ಬಂದಿದ್ದು, ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳು 4ರಂದು ವಾರಂಟ್ ಜಾರಿಯಾಗಿದ್ದು, ಉತ್ತಪ್ಪ ಅವರನ್ನು ಬಂಧಿಸುವಂತೆ ಇಪಿಎಫ್ ರೀಜನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪತ್ರ ಬರೆದಿದ್ದಾರೆೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಅನ್ವಯ ಉತ್ತಪ್ಪ ಅವರ ವಿಳಾಸಕ್ಕೆ ಪೊಲೀಸರು ತೆರಳಿದ್ದು, ಅವರು ಸದ್ಯ ಆ ವಿಳಾಸದಲ್ಲಿ ವಾಸವಿಲ್ಲ ಎಂದು ತಿಳಿದು ಬಂದಿದೆ.