ರನ್ನ ಬೆಳಗಲಿಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆ

Ravi Talawar
ರನ್ನ ಬೆಳಗಲಿಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆ
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.30., ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ರನ್ನ ಬೆಳಗಲಿಯ ಪರಮಾನಂದ ಗುಡ್ಡದಲ್ಲಿ ಸೋಮವಾರ ದಂದು ಜರುಗಿದ ಪರಮಾನಂದ
ದೇವಸ್ಥಾನದ ಗರ್ಭಗುಡಿಯ ಜಿರ್ನೋದ್ದಾರ ಸಮಯದಲ್ಲಿ ಶಿವಲಿಂಗ ಪತ್ತೆಯಾಗಿದೆ.

ದೇವಸ್ಥಾನದ ಹಿರಿಯ ಅರ್ಚಕರಾದ ಸದಾಶಿವ ಪೂಜಾರಿ ಅವರು ಭಂಡಾರದ ಒಡೆಯ, ಪವಾಡಗಳ ಮಹಾ ಮಹಿಮ ರಾದ ಗುಡ್ಡದ ಒಡೆಯ ಮಳೆ ಮಲ್ಲಪ್ಪ ಒಡೆಯರು ಇವರನ್ನೇ ಪರಮಾನಂದ ಮುತ್ಯಾ ಎಂದು ಕರೆಯುವುದು ವಾಡಿಕೆ ಇದೆ. ಗಿಜಗನಹಳ್ಳಿಗೆ ಭಾಗ್ಯಗಳನ್ನು ಹೊತ್ತು ತಂದ ಮಹಾಲಕ್ಷ್ಮಿ ಅಣ್ಣನಾಗಿ ನೇಲೆ ನಿಂತ ಪರಮಾನಂದ ಮುತ್ಯಾ ಅವರ ತಂಗಿಯ ಆಜ್ಞೆಯಂತೆ ಚೋಳರಾಜನ ಗರ್ವ ಕಳೆಯಲು ಹೊನ್ನ ಮಳೆಯನ್ನ ಸುರಿಸಿದ ಪವಾಡಪುರುಷ. ಈ ನಮ್ಮಪ್ಪ ಪರಮಾನಂದ ಅಜ್ಜ. ನಮ್ಮ ಪೂರ್ವಜರು ಒಂದು ಚಿಕ್ಕ ಗುಡಿಯನ್ನು ಕಟ್ಟಿಕೊಂಡು ಪೂಜೆ ಮಾಡುತ್ತಾ ಬರುತ್ತಿದ್ದರು. ಇತ್ತೀಚಿಗೆ ಎಲ್ಲಾ ಭಕ್ತಾದಿಗಳ ಮತ್ತು ಊರಿನ ಹಿರಿಯರ ಸಹಾಯ ಸಹಕಾರದ ಜೊತೆಗೆ ದೇವಸ್ಥಾನದ ಪುನರ್ ನವೀಕರಣ ಪ್ರಾರಂಭಗೊಂಡಿದೆ.

ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನೂ ತೆರುವುಗೋಳಿಸಿ ಅದೇ ಸ್ಥಳವನ್ನು ಅಗಿಯುತ್ತಾ ಹೋದ ಸಮಯದಲ್ಲಿ ಈ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಮತ್ತು ಲಿಂಗದ
ಕೆಳಭಾಗ ಸಂಪೂರ್ಣವಾಗಿ ಗಟ್ಟಿಯಾಗಿದ್ದು ಮಧ್ಯದ ಭಾಗದಲ್ಲಿ ಸಾಲಿಗ್ರಾಮ ದಷ್ಟು ರಂದ್ರವನ್ನು ನೋಡಬಹುದು ಅದರ ಮೇಲೆ ಸಾಲಿಗ್ರಾಮದ ಶಿವಲಿಂಗವನ್ನು ನಿಟ್ಟು ನಮ್ಮ ಪೂರ್ವಜರು ಪೂಜೆ ಮಾಡುತ್ತಿದ್ದರು ಎಂಬ ಊಹೆ ಎಲ್ಲರನ್ನು ಕಾಡುತ್ತಿದೆ. ಈಗಾಗಲೇ ಅಜ್ಜನ ದೈವಿ ವಾಣಿಗಳು ನಮ್ಮ ಕುಟುಂಬ ಮನೆತದಲ್ಲಿ ಒಬ್ಬರಿಂದ ಒಬ್ಬರಿಗೆ ದೈವನುಡಿಗಳು ಆಗುತ್ತಾ ಬರುತ್ತಿವೆ. ಆದರಿಂದ ಅಜ್ಜ ಯಾವ ಮಾರ್ಗವನ್ನು ತೋರುತ್ತಾನೋ ಆ ದಿಶೆಯಲ್ಲಿ ಈ ಲಿಂಗದ ಪೂಜೆ ಮುಂದುವರೆಯುತ್ತದೆ.

ಮತ್ತು ಕಟ್ಟಡ ಪ್ರಾರಂಭಗೊಂಡಿದ್ದು ಆದಷ್ಟು ಬೇಗ ಪೂರ್ಣಗೊಳ್ಳುವ ಹಂತಕ್ಕೆ ಬರುತ್ತಿದೆ. ಪ್ರತಿ ವರ್ಷ ಉತ್ತರಾ ನಕ್ಷತ್ರದ ಎರಡನೇ ಪಾದದ ಸಮಯದಲ್ಲಿ ಜಾತ್ರೆ ವೈಭವದಿಂದ
ಜರುಗುತ್ತದೆ. ಅಂದು ಕಡ್ಡಾಯವಾಗಿ ಮಳೆಯಾಗುತ್ತದೆ ಹಾಗೂ ಈ ಪವಾಡ ಒಡೆಯನಾದ ಪರಮಾನಂದ ದೇವರಿಗೆ ಪ್ರತೀ ಸೋಮವಾರ ಅಸಂಖ್ಯಾತ ಭಕ್ತರು ಬಂದು ತಮ್ಮ ಕಷ್ಟಗಳಿಗೆ
ಪರಿಹಾರ ಕಂಡುಕೊಂಡು, ದೇವರಿಗೆ ಹರಕೆ ಸಲ್ಲಿಸಿ ಭಯ ಭಕ್ತಿಗಳಿಂದ ನಮಸ್ಕರಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ. ಈಗಲೂ ಪ್ರತಿ ಪೂರ್ಣಿಮೆ ಮಧ್ಯರಾತ್ರಿ ಗುಡ್ಡದ
ಒಡೆಯನಿಗೆ ಬಂದ ಲಕ್ಷ್ಮಿ ದೇವಿಯು ಆರತಿಯ ಕಳಶವನ್ನು ತಂದು ಆರತಿ ಬೆಳಗುತ್ತಾಳೆ ಈ ಒಂದು ರೋಚಕ ವಿಚಾರವನ್ನು ನಮ್ಮ ಪೂರ್ವಜರು ತಿಳಿಸಿದ್ದಾರೆ. ಈ ದೃಶ್ಯಗಳನ್ನ ಅನೇಕ ಸಜ್ಜನ ಭಕ್ತರು ಸಹ ಕಣ್ತುಂಬಿಕೊಂಡಿದ್ದಾರೆ ಹಾಗೂ ತಾಯಿಂದ ವರವನ್ನು ಪಡೆದುಕೊಂಡಿದ್ದಾರೆ ಎಂದು ಹಿರಿಯರು ತಿಳಿಸಿದರು.

ಬಾಳು ಪೂಜೇರಿ, ಪರಮಾನಂದ ಪೂಜೇರಿ, ಗಂಗಪ್ಪ ನಾಯಕ, ಹಣಮಂತ ಕುರಿಮನಿ, ಪರಸಪ್ಪ ಹಳಂಗಳಿ, ಸಮರ್ಥ ಪೂಜೇರಿ ಪತ್ರಕರ್ತರಾದ ಮಹಾದೇವ ಕುಲಗೋಡ, ರಾಘವೇಂದ್ರ ನೀಲಣ್ಣವರ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article