ಅಥಣಿ: ಅಥಣಿ ಪಟ್ಟಣದಲ್ಲಿ ದಿವ್ಯ ಭವ್ಯವಾದ ಅಮೃತಲಿಂಗ ದೇವಸ್ಥಾನ ಜಿರ್ನೋರ್ದಾರ ಮತ್ತು ಸುಂದರವಾಗಿ ದೇವಾಲಯ ನಿರ್ಮಾಣವಾಗಿರೋದು ಸಂತಸ ತಂದಿದೆ ಅಥಣಿಯಲ್ಲಿ ಒಂದೇ ಕಡೆ ಹೆಚ್ಚು ದೇವಾಲಯಗಳು ಇರುವುದು ಇನ್ನೊಂದು ವಿಶೇಷ ಧರ್ಮ ಮಾರ್ಗದಲ್ಲಿ ಅಥಣಿ ನಡೆಯುತ್ತಿರುವುದು ನಾಡಿಗೆ ಹೆಮ್ಮೆ ಎಂದು ಶ್ರೀಶೈಲ ಪೀಠದ ಚೆನ್ನ ಸಿದ್ದರಾಮ ಪಂಡಿತರಾಧ್ಯ ಭಗವತ್ಪಾದರು
ಹೇಳಿದರು.
   ಅವರು ಗುರುವಾರ 30ರಂದು ಪಟ್ಟಣದ ಅಮೃತಲಿಂಗೇಶ್ವರ ದೇವಾಲಯದ ಶಿಖರದ ಕಳಸಾರವನ್ನು ಹಾಗೂ ಪರಿವಾರ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡ ಧರ್ಮ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಅಥಣಿ ಪುಣ್ಯ ಭೂಮಿ ತಪಸ್ವಿಗಳ ನಾಡು ಇಲ್ಲಿಯ ಭಕ್ತರ ಭಕ್ತಿ ಅಪಾರವಾಗಿದೆ ಶ್ರೀಶೈಲಕ್ಕೂ ಅಥಣಿ ಅವಿನಾಭಾವ ಸಂಬಂಧವಿದೆ ಅಮೃತಲಿಂಗ ದೇವಾಲಯವು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡು ಸಮಾಜಕ್ಕೆ ಅರ್ಪಿತವಾಗಿದೆ ಭಕ್ತರೂ ಕೂಡ ಶ್ರದ್ಧೆ ಭಕ್ತಿಯಿಂದ ತಮ್ಮ ಸೇವೆಯನ್ನು ಸಮರ್ಪಿಸುತ್ತಿರುವುದು ಕಾರ್ಯಕ್ಕೆ ಸಾಕ್ಷಿಯಾಗಿದೆ ಊರಿಗೊಂದು ಶಿವಾಲಯ ಹನೆಗೆ ವಿಭೂತಿ ಇದು ಊರಿನ ಗೌರವ ಹೆಚ್ಚಿಸುತ್ತದೆ ಇದೇ ರೀತಿ ಮನೆಯಲ್ಲಿರುವ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇದು ನಾವು ಮಾಡುವ ದೇವರ ಸೇವೆ ಇನ್ನೊಬ್ಬರಿಗೆ ಒಳಿತಾಗುವ ರೀತಿಯಲ್ಲಿ ಮಾತನಾಡುವುದು ಕೂಡ ನಮ್ಮ ಸದ್ಭಾವ ಪರೋಪಕಾರ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆಯಬಾರದು ಎಂದರು.
ಸಾನಿಧ್ಯ ವಹಿಸಿದ ಬೆಳ್ಳಂಕಿಯ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಮತ್ತು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಅಥಣಿ ಎಂದರೆ ಶಿವನ ಶಿವಾಲಯ ಇದ್ದಂತೆ ಇಲ್ಲಿ ಶಿವಯೋಗ ಮತ್ತು ಶಿವನ ನಿತ್ಯ ಆರಾಧನೆ ನಡೆಯುತ್ತಿದೆ.  ದೇವಾಲಯವು  ಐತಿಹಾಸಿಕ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ನಾಡಿಗೆ ವಿಶೇಷವಾಗಿದೆ ಎಂದರು.
  ಪ್ರಸ್ತಾವಿಕವಾಗಿ ಸದಸ್ಯ ಆನಂದ ಟೊಣಪಿ ಮಾತನಾಡಿ ದೇವಾಲಯ ಕಟ್ಟಡಕ್ಕೆ ಹಲವಾರು ದಾನಿಗಳು ತಮ್ಮ ದೇನಿಗೆಯನ್ನು ನೀಡುವ ಮೂಲಕ ಸುಂದರವಾಗಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಲ್ಲ ಭಕ್ತರ ಸಹಕಾರ ದಿಂದ ದೇವಾಲಯದ ಜೀವನ ದಾರ ಯಶಸ್ವಿಯಾಗಿದೆ ಆಕರ್ಷಣೀಯವಾಗಿದೆ ಇದು ಐತಿಹಾಸಿಕ ಇತಿಹಾಸ ಕಾಲದ ದೇವಾಲಯವಾಗಿದೆ ಇಲ್ಲಿಯ ಶಿವಲಿಂಗ ಅತ್ಯಂತ ಅದ್ಭುತವಾಗಿ ನಿರ್ಮಾಣಗೊಂಡಿದೆ ಎಂದರು.
ಸಮಾರಂಭದಲ್ಲಿ ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ. ಉಪಾಧ್ಯಕ್ಷ ಅಮಿತ್ ಮಹಾಜನ್. ಸುರೇಶ್ ಗೋಟಖಿ0ಡಿ. ಕಾರ್ತಿಕ್ ಮಿರಜ್ಕರ್. ಹಿರಿಯರಾದ ಪ್ರಕಾಶ್ ಮಹಾಜನ್ ಸಿದ್ದು ಪಾಟೀಲ್ ರಾಜು  ಬುಲ್ ಬುಲೆ  ವಿಶ್ವನಾಥ್ ಕಮತಗಿ  ಸೇರಿದಂತೆ ದೇವಸ್ಥಾನ ಸಮಿತಿ ಎಲ್ಲ ಸದಸ್ಯರು ಭಕ್ತರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾಗತ: ಅಮಿತ್ ಮಹಾಜನ್ ನಿರೂಪಣೆ: ಪ್ರಿಯಂ ವದ ಹುಲಗಬಾಳಿ ಮತ್ತು ಭಾಗ್ಯಶ್ರೀ ಕಮತಗಿ

 
		 
		 
		
