ರನ್ನ ಬೆಳಗಲಿ: ಜು.೧೭., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಬುಧ ವಾರ ದಂದು ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಅಮೃತ ಸಿಂಚನ ಕಾರ್ಯಕ್ರಮ ಜರಗಿತು.
ವಿದ್ಯಾರ್ಥಿಗಳಾಗಿದ್ದಾಗಲೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೂರು ವ?ದ ಬುದ್ದಿ ನೂರು ವ? ಎಂಬ ಗಾದೆಯ ಮಾತು ಸುಳ್ಳಾಗದು. ನಾವು ಎಲ್ಲದರಲ್ಲಿಯೂ ಒಳ್ಳೆಯದನ್ನೇ ಹುಡುಕಬೇಕು.ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯವರಾಗಿ ಬದುಕಬೇಕು. ಕೆಟ್ಟವರಾಗಲು ನಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಕುಂಬಾರನಿಗೆ ವರು? ದೊಣ್ಣೆಗೆ ನಿಮಿ? ಎಂಬ ಗಾದೆಯ ಅರ್ಥವನ್ನು ಅರಿಯಬೇಕು ಎಂದು ಬಾಗಲಕೋಟೆಯ ಸಾಹಿತಿಗಳಾದ ಡಾ.ಪ್ರಕಾಶ ಖಾಡೆ ಹೇಳಿದರು.
ಸಾಹಿತಿಗಳಾದ ಯಶವಂತ ವಾಜಂತ್ರಿ ನಗುವಿನಿಂದ ಆರೋಗ್ಯ ಸುಧಾರಿಸುತ್ತದೆ. ಜೀವನಕ್ಕೆ ಲವಲವಿಕೆ ಸಿಗುತ್ತದೆ. ಅಭ್ಯಾಸದೊಂದಿಗೆ ಒಂದಿ? ಹಾಸ್ಯ ಪ್ರವೃತ್ತಿಯನ್ನು ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಾನಪದ ಕವಿ ಬಸವರಾಜ ಕೊಣ್ಣೂರ,ಎಸ್.ಡಿ.ಎಮ್.ಸಿ.ಅಧ್ಯಕ್ಷ ಗಿರೀಶ ಸಂಕ್ರಟ್ಟಿ, ಬಿ.ಪಿ.ಚೋಪಡೆ,ಮುಖ್ಯ ಗುರುಮಾತೆ ಎಸ್.ಎಸ್.ಉದಪುಡಿ, ವ್ಹಿ.ಎಂ.ಹೊಸೂರ,ಎಲ್. ವಾಯ್. ಶಾಸ್ತ್ರಿ, ಎಸ್.ಎಮ್.ಮೇಗಾಡಿ, ಎಲ್.ಕೆ.ಮಂಟೂರ, ಶ್ರೀಶೈಲ ಕಾಡದೇವರ, ಲಕ್ಷ್ಮಣ ಕುಂಬಾಳಿ,ಕಿರಣ ಪವಾರ, ರವಿಕುಮಾರ ಹಿರೇಕಲ್ಮಠ, ಶಿವಾನಂದ ನೀಲನ್ನವರ, ಮಾಯಪ್ಪ ಲೋಕ್ಯಾಗೋಳ, ಮಹಾಂತೇಶ ಲೋಕಾಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.