ಅಥಣಿ :ತಾಲೂಕಿನ ತೆಲಸಂಗ ಗ್ರಾಮ ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ, ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ, ನಿಸ್ವಾರ್ಥ ರಂಗಭೂಮಿಯ ಸೇವೆಕ ಅಮೋಘ ಖೊಬ್ರಿ ಕರ್ನಾಟಕದ ರಂಗಭೂಮಿಯ ಆಸ್ತಿ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾಧಿಕಾರಿ ಸಿದ್ದಪ್ಪಾ ಗಂಗಾಧರ ಹೇಳಿದರು.
ಗ್ರಾಮದಲ್ಲಿ ಡಾ.ಪಂಡೀತ ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆ ಮತ್ತು ಬಸವ ಬಳಗದ ವತಿಯಿಂದ ರಂಗ ದಿಗ್ಗಜ ಏಣಗಿ ನಟರಾಜ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಕಕಾರ ನ್ಯಾಯವಾದಿ ಅಮೋಘ ಖೊಬ್ರಿ ಅವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ, ವಕೀಲನಾಗಿದ್ದುಕೊಂಡೇ ವೃತ್ತಿ ರಂಗಭೂಮಿ ಕಲಾವಿದರಿಗೆ ಸಮನಾಗಿ ೩೦ ವರ್ಷಗಳಿಂದ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡುರುವ ಅಮೋಘ ಖೊಬ್ರಿ ಅವರ ರಂಗ ಸೇವೆ ಮಾದರಿ ಆಗಿದೆ.
ಯಾವುದೇ ಪಾತ್ರವನ್ನು ಮಾಡಿದರೂ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಆ ಪಾತ್ರಕ್ಕೆ ಜೀವ ತುಂಬುವ ಮನೋಜ್ಞ ಅಭಿನಯಕ್ಕೆ ಈ ದಿನಗಳಲ್ಲಿ ಅಮೋಘ ಅವರಿಗೆ ಯಾರೂ ಸರಿಸಾಟಿ ಇಲ್ಲ. ಇಂತಹ ಕಲಾವಿದರಿಂದ ಕಲೆ ಸಂಸ್ಕೃತಿಗೆ ಶಕ್ತಿ ತುಂಬುತ್ತದೆ ಎಂದರು.
ಸತ್ಕಾರ ಸ್ವೀಕರಿಸಿದ ಅಮೋಘ ಖೊಬ್ರಿ ಮಾತನಾಡಿ, ರಂಗಭೂಮಿ ಸಮಾಜದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ ಮನರಂಜನೆಯೊAದಿಗೆ ಸಮಾಜವನ್ನು ಬೆಸೆಯುವ, ಪರಿವರ್ತಿಸುವ ಶಕ್ತಿ ರಂಗಭೂಮಿಗೆ ಇದೆ. ರಂಗನಟ ಏಣಗಿ ಬಾಳಪ್ಪ ಮತ್ತು ಏನಗಿ ನಟರಾಜ ಸೇವರಿದಂತೆ ಸಾಲು ಸಾಲು ಕಲಾವಿದರು ಇಡಿ ತಮ್ಮ ಜೀವನವನ್ನು ರಂಗಭೂಮಿ ಉಳುವಿಗೆ ಶ್ರಮಿಸಿದ್ದು, ಅವರು ಬಿಟ್ಟು ಹೋದ ನೆನಪು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಕನ್ನಡ ರಂಗಭೂಮಿಯ ಸಂಸ್ಕೃತಿ ಉಳಿಸಿ ಬೆಳೆಸಲು ಬದುಕಿನುದ್ದಕ್ಕೂ ರಂಗಭೂಮಿಗಾಗಿ ದುಡಿದವರ ಸ್ಮರಣೆ ಅತ್ಯಗತ್ಯ. ನಶಿಸುತ್ತೀರುವ ರಂಗ ಪರಂಪರೆ ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಸಂಸ್ಕೃತಿಯ ಶಕ್ತಿಯನ್ನು ಮುಂದೀನ ಪೀಳಿಗೆಗೆ ಬಳುವಳಿಯಾಗಿ ಕೊಡಲು ಸಾಧ್ಯ ಎಂದರು.
ಡಾ.ಬಿ.ಎಸ್.ಕಮಾನ್ ಮಾತನಾಡಿ, ನ್ಯಾಯವಾದಿ ಪಿ.ಪಿ.ಮೋರೆ, ಸಂಗಮೆಶ ಉಂಡೋಡಿ, ಚಂದ್ರಶೇಖರ ಹತ್ತಿ, ಡಾ.ಆರ್.ಡಿ.ಪೂಜಾರಿ, ಶ್ರೀಶೈಲ ಶೆಲ್ಲೆಪ್ಪಗೋಳ, ಶೇಖರ ರೋಡಗಿ, ಚೆನ್ನಬಸಪ್ಪಾ ಗಂಗಾಧರ, ಈಶ್ವರ ಹತ್ತಿ, ಪ್ರಕಾಶ ಸಿಂದಗಿ, ಅಶೋಕ ಪರುಶೆಟ್ಟಿ, ಮೋಹೀನ ನಧಾಫ್, ಶಿವಪ್ಪಾ ಹತ್ತಿ, ಕುಮಾರ ರೋಡಗಿ, ಅಪ್ಪು ಜಮಾದರ, ಗುರಯ್ಯಾ ಮಠಪತಿ, ಗೋಪಾಲ ಶೆಲ್ಲೆಪ್ಪಗೋಳ, ಸುರೇಶ ಖೊಳಂಬಿ, ಬುಡ್ಡಾಸಾಬ ಮುಜಾವರ, ಗಪೂರ ಮುಲ್ಲಾ, ಸುನೀಲ ಉಂಡೋಡಿ, ಶಿವಯೋಗಿ ಹತ್ತಿ, ಶೆಂಬು ಸಿಂದಗಿ, ಆನಂದ ಥೈಕಾರ ಸೇರಿದಂತೆ ಇತರರು ಇದ್ದರು.