ಭಾರತದ ಇತಿಹಾಸದಲ್ಲಿ ದೀರ್ಘಾವಧಿ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ: ಸುಭಾಷ್ ಪಾಟೀಲ 

Ravi Talawar
ಭಾರತದ ಇತಿಹಾಸದಲ್ಲಿ ದೀರ್ಘಾವಧಿ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ: ಸುಭಾಷ್ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ: ಭಾರತದ ಇತಿಹಾಸದಲ್ಲಿ ದೀರ್ಘಾವಧಿಗೆ ಕೇಂದ್ರ ಗೃಹ ಸಚಿವರಾಗಿ ಕಾರ್ಯ
ನಿರ್ವಹಿಸುವ ಮೂಲಕ ಅಮಿತ್ ಶಾ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರು  ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು
ಅಮಿತ್ ಶಾ ಅವರು ಮೇ 30, 2019 ರಿಂದ ಭಾರತದ ಗೃಹ ಸಚಿವರಾಗಿ ಸಲ್ಲಿಸುತ್ತಿದ್ದಾರೆ. ಪಕ್ಷದ
ಸಂಘಟನೆಯ ಜೊತೆ ಜೊತೆಗೆ ಗೃಹ ಸಚಿವರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ದಾಖಲೆ
ಬರೆದಿರುವ ಅಮಿತ್‌ ಶಾ ಅವರು, ದೇಶದಲ್ಲಿ ಉಗ್ರಗಾಮಿ ಚಟುವಟಿಕೆ, ನಕ್ಸಲ್ ಚಟುವಟಿಕೆಯಂತ
ಕಾನೂನು ಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವ ಮೂಲಕ ಗಮನ ಸೆಳೆದಿದ್ದಾರೆ
ಎಂದು ಹೇಳಿದ್ದಾರೆ.
ಈ ಹಿಂದೆ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಗೋವಿಂದ ವಲ್ಲಭ ಪಂತ್‌ ಮತ್ತು ಲಾಲ್
ಕೃಷ್ಣ ಅಡ್ವಾಣಿ ಅವರ ದಾಖಲೆಯನ್ನು ಹಿಂದಿಕ್ಕಿ ಅತಿ ಹೆಚ್ಚು ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿರುವ
ಕೀರ್ತಿಗೆ ಪಾತ್ರರಾಗಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರು 6 ವರ್ಷ, 64 ದಿನಗಳ ಕಾಲ ಗೃಹ
ಸಚಿವರಾಗಿದ್ದರು. ಗೋವಿಂದ ವಲ್ಲಭ ಪಂತ್ ಅವರು 6 ವರ್ಷ 56 ದಿನಗಳ ಕಾಲ ಗೃಹ ಸಚಿವರಾಗಿ
ಕಾರ್ಯ ನಿರ್ವಹಿಸಿದ್ದರು ಎಂದು  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಅನುಷ್ಠಾನ ಅವರ
ಗಮನಾರ್ಹ ಸಾಧನೆಗಳಲ್ಲಿ ಸೇರಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೆಯ
ವಿಧಯನ್ನು ರದ್ದುಗೊಳಿಸುವಲ್ಲಿ ಅಮಿತ್ ಶಾ  ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು
ವಿವರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಮನಾರ್ಹ ಇಳಿಕೆ ಕಾಣಲು
ಅಮಿತ್ ಶಾ ಅವರ ನಾಯಕತ್ವದಲ್ಲಿ ರೂಪಗೊಂಡ ಕಾರ್ಯಗಳು ಕಾರಣವಾಗಿದ್ದು, ಇಂದು ಆ ರಾಜ್ಯದಲ್ಲಿ
ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲೂ ಮತ್ತು ರಾಷ್ಟ್ರೀಯ ಭದ್ರತೆ ಸದೃಢಗೊಳ್ಳಲು ಅವರು
ಕಾರಣಿಭೂತರಾಗಿದ್ದಾರೆ ಎಂದಿದ್ದಾರೆ.
2014 ಮತ್ತು 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ
ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಪ್ರಮುಖ ಪಾತ್ರವನ್ನು ಅಮಿತ್ ಶಾ
ವಹಿಸಿದ್ದರು. ದೇಶದ ಆಂತರಿಕ ಭದ್ರತಾ ವ್ಯವಸ್ಥೆ ಬಲಪಡಿಸಲು ಅವರು ಕೈಗೊಂಡಿರುವ ಕ್ರಮಗಳು
ಸ್ವಾಗತಾರ್ಹವಾಗಿವೆ ಎಂದಿರುವ ಅವರು, ದೀರ್ಘಾವಧಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಅಮಿತ್‌
ಶಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ
WhatsApp Group Join Now
Telegram Group Join Now
Share This Article