ನವದೆಹಲಿ, ಆಗಸ್ಟ್ 05: ಮಾತೆತ್ತಿದರೆ ನೀವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಸುಂಕ ಹೆಚ್ಚು ಮಾಡುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿರುವ ಅಮೆರಿಕಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಮಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, 1954ರಿಂದ 2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿರುವುದು ನಮಗೇನು ತಿಳಿದಿಲ್ಲ ಎಂದುಕೊಂಡಿದ್ದೀರಾ ಎಂದು ಭಾರತೀಯ ಸೇನೆ ಅಮೆರಿಕವನ್ನು ಪ್ರಶ್ನಿಸಿದೆ.
ಅಮೆರಿಕಾ ಪಾಕ್ಗೆ 2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ!

1971 ರ ಯುದ್ಧಕ್ಕಾಗಿ ಅಮೆರಿಕವು ದಶಕಗಳಿಂದ ಪಾಕಿಸ್ತಾನಕ್ಕೆ ಹೇಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂಬುದನ್ನು ಚರ್ಚಿಸುವ 1971 ರ ಹಳೆಯ ವೃತ್ತಪತ್ರಿಕೆ ತುಣುಕನ್ನು ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ಹಂಚಿಕೊಂಡಿದೆ .
ಆಗಸ್ಟ್ 5, 1971 ರ ಹಳೆಯ ವೃತ್ತಪತ್ರಿಕೆ ತುಣುಕನ್ನು ಹಂಚಿಕೊಂಡಿದ್ದು, ಅಮೆರಿಕ ಸರ್ಕಾರ ದಶಕಗಳಿಂದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಹೇಗೆ ಪೂರೈಸುತ್ತಿದೆ ಎಂಬುದನ್ನು ತೋರಿಸುತ್ತದೆ. ಪಾಕಿಸ್ತಾನವು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಾಂಗ್ಲಾದೇಶದಲ್ಲಿ ತನ್ನ ಸಶಸ್ತ್ರ ಆಕ್ರಮಣವನ್ನು ಪ್ರಾರಂಭಿಸಿದ್ದರಿಂದ, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಟೋ ಶಕ್ತಿಗಳು ಮತ್ತು ಸೋವಿಯತ್ ಒಕ್ಕೂಟವನ್ನು ಸಂಪರ್ಕಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಆಗಿನ ರಕ್ಷಣಾ ಉತ್ಪಾದನಾ ಸಚಿವ ವಿ.ಸಿ. ಶುಕ್ಲಾ ಅವರ ಪ್ರತಿಕ್ರಿಯೆಯನ್ನು ಕ್ಲಿಪ್ ಉಲ್ಲೇಖಿಸುತ್ತದೆ.