ಅಂಬೇಡ್ಕರ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭ

Ravi Talawar
ಅಂಬೇಡ್ಕರ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭ
WhatsApp Group Join Now
Telegram Group Join Now
ಬಳ್ಳಾರಿ,ಏ.೦7: ಡಾ||ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತಿ ಅಂಗವಾಗಿ ಬಳ್ಳಾರಿಯಲಿ ಮೊಟ್ಟ ಮೊದಲನೇ ಬಾರಿಗೆ ಅಂಬೇಡ್ಕರ್ ಕ್ರಿಕೆಟ್ ಪ್ರೀಮಿಯರ್ ಲೀಗ್ (ಸೀಸನ್ ಓನ್) ೨೦೨೫ ವನ್ನು ನಗರದ ವಿಮ್ಸ್ ಕ್ರೀಡಾಂಗಣದಲ್ಲಿ  ಏ.೭ ರಿಂದ ೧೪ನೇ  ರ ವರೆಗೆ  ಹಮ್ಮಿಕೊಳ್ಳಲಾಗಿದ್ದು,  ಕಾರ್ಯಕ್ರಮಕ್ಕೆ ಅತಿಥಿಗಳಾಗಿ  ಯುವ ನಾಯಕ ಹಾಗೂ ಯುವ ಹೋರಾಟಗಾರ ಕಟ್ಟೇಸ್ವಾಮಿ ಚಾಲನೆ  ನೀಡಿ, ಈ  ಕ್ರಿಕೆಟ್ ಪಂದ್ಯಾವಳಿಗೆ  ಶೀರ್ಷಿಕೆ  ಸಹ  ಪ್ರಾಯೋಜಕವನ್ನು  ಜಿ.ಕೆ.ಸ್ವಾಮಿ ( ವಿಜಯ್)  ಜಿ ಕೆ ಪೌಂಡೇಷನ್ ಮತ್ತು ಜಿ ಕೆ ಗ್ರೂಪ್  ಕರ್ನಾಟಕ ಬಳ್ಳಾರಿ ಇವರು ನೀಡಿರುತ್ತಾರೆ ಎಂದು ತಿಳಿಸುತ್ತಾ ಆಟಗಾರರಿಗೆ ಶುಭ ಕೋರಿದರು.
ಇದೇ ಮೊಟ್ಟಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಡಾ” ಬಿ  ಅರ್ ಅಂಬೇಡ್ಕರ್ ರವರ  ಜಯಂತಿಯ ಅಂಗವಾಗಿ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದು ತಂಡದ ಮಲಿಕರಿಗೆ ಹಾಗೂ ಆಟಗಾರರಿಗೆ ಮತ್ತು ಆಯೋಜಕರಿಗೆ ಶುಭ ಕೋರಿದರು.
ಕಾರ್ಯಕ್ರಮದ  ಅತಿಥಿ ಮಲ್ಲೇಶ್ವರಿ ಮಾತಾನಾಡಿ, ವಿಶ್ವಜ್ಞಾನಿ ಮಹಾನಾಯಕ ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.
ಆಯೋಜಕ ಚಂದ್ರಣ್ಣ ಮಾತಾನಾಡಿ, ಈ ಪಂದ್ಯಾವಳಿಯಲ್ಲಿ ಸುಮಾರು ೧೪ ತಂಡಗಳು ನೋಂದಣಿಯನ್ನು ಮಾಡಿಕೊಂಡಿದ್ದಾರೆ. ೮ ದಿನಗಳ ಕಾಲ ಈ ಪಂದ್ಯಾವಳಿಗಳು ನಡೆಯಲಿದ್ದು ಸದರಿ ಅಂತಿಮ ಪಂದ್ಯಾವಳಿಯು ಏ.೧೪ ಡಾ” ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯAದು ನಡೆಯಲಿದೆ ಎಂದು ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ,ಮಹೇಶ್ ಕುರುವಳ್ಳಿ,  ಕೆ ವೆಂಕಟೇಶ,    ಎ ಕೆ ತಿಪ್ಪಯ್ಯ ಎಸ್   ಪ್ರಕಾಶ್. ರತ್ನಯ್ಯ, ಶಿವರಾಮ , ಗುರು, ದುರ್ಗಪ್ರಾಸದ್. ಹರೀಶ್, ಇನ್ನೂ ಅನೇಕರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article