ಬೆಳಗಾವಿ. ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗೆ ಗೋಕಾಕ ತಾಲೂಕಾ ದಿಂದ ಮಾಜಿ ಸಚಿವ ಹಾಗೂ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರೆ, ಇತ್ತ ಮೂಡಲಗಿ ತಾಲೂಕಿನಿಂದ ಕಲ್ಲೋಳಿ ಪಟ್ಟಣದ ನೀಲಕಂಠ ಬಸವರಾಜ ಕಪ್ಪಲಗುದ್ದಿ ಅವರು ಶನಿವಾರದಂದು ಡಿಸಿಸಿ ಬ್ಯಾಂಕ ಪ್ರಧಾನ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅರಭಾಂವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ,ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಶಾಸಕ ವಿಶ್ವಾಸ ವೈದ್ಯ, ಅಪ್ಪಸಾಹೇಬ ಕುಲಗುಡೆ, ಅರವಿಂದ ಪಾಟೀಲ, ರಾಹುಲ ಜಾರಕಿಹೊಳಿ, ಲಕ್ಷ್ಮಣರಾವ ಚಿಂಗಳೆ,ಸೇರಿದಂತೆ ಗೋಕಾಕ, ಮೂಡಲಗಿ ತಾಲೂಕಿನ ಮುಖಂಡರು, ಸಹಕಾರಿಗಳು, ರೈತರು ಪಾಲ್ಗೊಂಡಿದ್ದರು.


