ಶಿಕ್ಷಣದ ಜೊತೆಗೆ ಕೌಶಲ್ಯವು ಅವಶ್ಯಕ – ಬಿಇಓ ಬಸಣ್ಣವರ

Pratibha Boi
ಶಿಕ್ಷಣದ ಜೊತೆಗೆ ಕೌಶಲ್ಯವು ಅವಶ್ಯಕ – ಬಿಇಓ ಬಸಣ್ಣವರ
WhatsApp Group Join Now
Telegram Group Join Now

ಜಮಖಂಡಿ;ಕೇವಲ ಶಿಕ್ಷಣದ ಪದವಿಗಳಿದ್ದರೇ ಸಾಲದು ಜೊತೆಗೆ ಕೌಶಲ್ಯವು ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪಠ್ಯದ ಜ್ಞಾನದ ಜೊತೆಗೆ ಕೌಶಲ್ಯ ವಿದ್ದವರು ಯಶಸ್ಸು ಪಡೆಯಲು ಸಾದ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು. ನಗರದ ಅನ್ನಪೂರ್ಣೇಶ್ವರಿ ಹೊಟೆಲ್‌ನ ಸಭಾಭವನದಲ್ಲಿ ಚಿಲ್ಡ್ರನ್‌ ಆಫ್‌ಇಂಡಿಯಾ ಫೌಂಡೇಶನ್‌, ಚೈತನ್ಯ ಮಹಿಳಾ ಸಂಘ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದೇವದಾಸಿ ಮಹಿಳೆಯರು, ಮತ್ತು ಮಕ್ಕಳ ಸಮಸ್ಯೆಗಳು, ಪರಿಹಾರ ಎಂಭ ವಿಷಯದ ಮೇಲೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜೊತೆಗೆ ಕೌಶಲ್ಯಕ್ಕೆ ಆದ್ಯತೆ ನೀಡಬೇಕು, ದೇವದಾಸಿ ಅನಿಷ್ಠ ಪದ್ಧತಿಯು ಸಂವಿಧಾನದ 16ನೇಯ ಆರ್ಟಿಕಲ್‌ ಪ್ರಕಾರ ಕಡ್ಡಾಯ ಶಿಕ್ಷಣದ ಹಕ್ಕು ಬಂದಾಗಿನಿಂದ ಕಡಿಮೆಯಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಶಿಕ್ಷಣ ಕಡಿತಗೊಳಿಸಿದೆ ಎಂದು ಹೇಳಿದರು. ದೇವದಾಸಿ ಮಕ್ಕಳು ತಂದೆಯ ಹೆಸರು ಇರುವ ಜಾಗದಲ್ಲಿ ತಾಯಿಯ ಹೆಸರನ್ನು ನೋಂದಾಯಿಸ ಬಹುದಾಗಿದೆ. ದೇವದಾಸಿಯರ ಗಣತಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಅಂದರೆ ಸರ್ಕಾರದ ಸೌಲತ್ತುಗಳನ್ನು ಪಡೆದು ಕೊಳ್ಳಬಹುದೆಂದು ಹೇಳಿದರು.ಚೈತನ್ಯ ಮಹಿಳಾ ಸಂಘದ ಅಧ್ಯಕ್ಷೆ ಮಧು ನಡುವಿನಮನಿ ಅವರು ಮಾತನಾಡಿ ಸಂಘದ ವತಿಯಿಂದ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ಕೌಶಲ್ಯಾಭಿವೃದ್ಧಿ ಪಡಿಸುವ ಶಿಬಿರಗಳನ್ನು, ತರಬತಿ ನೀಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಬಿ.ಜಿ.ಹಿರೇಮಠ ಮಾತನಾಡಿ 1984 ಹಾಗೂ 2007 ರಲ್ಲಿ ದೇವದಾಸಿಯರ ಸರ್ವೇ ನಡೆಸಲಾಗಿತ್ತು,ಪನ; ಸರ್ಕಾರ 2025 ಸಪ್ಟೆಂಬರ್‌ ನಿಂದ ಡಿಸೆಂಬರ ವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಸರ್ವೆ ಕಾರ್ಯನಡೆಸುತ್ತಿದೆ. ತಾಲೂಕಿನಲ್ಲಿ 1574 ದೇವದಾಸಿಯರಿದ್ದು 1061 ಜನರ ಸರ್ವೇಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದರು. ಚೈತನ್ಯ ಮಹಿಳಾ ಸಂಘದ ರೇಖಾ ಗಾಡಿ ಮಾತನಾಡಿ ಸಂಘದ ಕಾರ್ಯವೈಖರಿಗಳನ್ನು ವಿವರಿಸಿದರು. ದೇವದಾಸಿಯರಿಗೆ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ, ವಸತಿ ಯೋಜನೆಯ ಅಡಿ ನಿವೇಶನ ಮಂಜೂರಾತಿ, ಜಮಿನು ಹಾಗೂ ಮನೆಗಳ ನವಿಕರಣಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ, 2ಸಾವಿರ ಇರುವ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು ಸರ್ಕಾರಿ ನೌಕರಿಗಳಲ್ಲಿ ರಿಜರ್ವೇಶನ್‌ ನೀಡುವ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಪತ್ರಕರ್ತ ಮಲ್ಲಪ್ಪ ಆಳಗಿ, ಮೋಹನ್‌ ಸಾವಂತ, ಸಮಾಜ ಕಲ್ಯಾಣ ಇಲಾಖೆಯ ಎಸ್‌.ಜಿ.ಪತ್ತಾರ ವೇದಿಕೆಯಲ್ಲಿದ್ದರು. ಕು.ಸ್ವಪ್ನಾಪ್ರಾರ್ಥನೆ, ಕು. ಸುಶ್ಮಿತಾ ಸ್ವಾಗತ ಹಾಗೂ ಕುಮಾರಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಗಾಡಿ ವಂದಿಸಿದರು.

WhatsApp Group Join Now
Telegram Group Join Now
Share This Article