ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಗಳು ದಿನೇ ದಿನೇ ಬೆಳಕಿಗೆ ಬರುತ್ತಲೇ ಇದೆ. ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಬಂಧನವಾಗಿರುವ ನಟ ರನ್ಯಾ ರಾವ್ ಪ್ರಿಯಕರರಿಗೆ ಜೈಲಿನಲ್ಲಿ ಹೈಫೈ ಟ್ರೀಟ್ಮೆಂಟ್ ನೀಡಲಾಗಿದೆ.
ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಆದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವರಿಗೆ ‘ಬಿಂದಾಸ್ ಲೈಫ್‘ ಸಿಗುತ್ತಿದೆ ಎಂದು ಆರೋಪಗಳು ಎದ್ದಿವೆ.
ರನ್ಯಾ ರಾವ್ ಪ್ರಿಯಕರ ತರಣ್ ರಾಜ್ಗೆ ಮೊಬೈಲ್ ಫೋನ್, ಸೆಲ್ನಲ್ಲಿ ಟಿವಿ ವ್ಯವಸ್ಥೆ ಸೇರಿದಂತೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಚರ್ಚೆ ಉಂಟಾಗಿದೆ. ಇದೇ ರೀತಿ, ವಿಕೃತ ಕಾಮಿ ಉಮೇಶ್ ರೆಡ್ಡಿಗೂ ಸೌಲಭ್ಯಗಳು ದೊರೆಯುತ್ತಿವೆ ಎಂಬ ಆರೋಪ ಕೂಡ ಕೇಳಿಬಂದಿದೆ.


