ಅಥಣಿ : ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸುವದು ಹಾಗೂ ಮನೆ ಆಹಾರ ಪದ್ಧತಿಯ ಮಹತ್ವದ ಬಗ್ಗೆ ತಿಳುವಳಿಕೆ ನೀಡುವುದೇ ಈ ಆಹಾರ ಮೇಳೆದ ಮುಖ್ಯ ಉದ್ದೇಶವಾಗಿದೆ ಎಂದು ಉರ್ದು ಸಿಆರ್ ಪಿ ಜಾಫರಷರೀಫ್ ಚಬನೂರ ಹೇಳಿದರು
ಅವರು ಪಟ್ಟಣದ ಅಲ್ಲಾಮಾ ಇಕ್ಬಾಲ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇಂದಿನ ಆಧುನಿಕ ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನವಷ್ಟೇ ನೀಡಿದರೆ ಸಾಲದು, ಪ್ರಾಯೋಗಿಕ ಜ್ಞಾನವೂ ಅಗತ್ಯ. ಮಕ್ಕಳ ಸಂತೆ ಮತ್ತು ಆಹಾರ ಮೇಳದ ಮೂಲಕ ಮಕ್ಕಳಿಗೆ ಹಣದ ಮೌಲ್ಯ, ವ್ಯವಹಾರ ಜ್ಞಾನ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ಕಲೆ ಬರುತ್ತದೆ. ಈ ನಿಟ್ಟಿನಲ್ಲಿ ಅಲ್ಲಾಮಾ ಇಕ್ಬಾಲ್ ಶಾಲೆಯ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
“ಮಕ್ಕಳ ಆಹಾರ ಮೇಳ’ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.ಶಾಲಾ ಮಕ್ಕಳು ಮನೆಯಲ್ಲಿ ಸಿದ್ಧಪಡಿಸಿದ ತಿಂಡಿ-ತಿನಿಸುಗಳನ್ನು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಪಾಲಕರು ಮಕ್ಕಳಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ರುಚಿ ಸವಿದರು, ಮಕ್ಕಳಲ್ಲಿರುವ ವ್ಯಾಪಾರ ಚತುರತೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಆನಂತರ ಶಾಲೆಯ ಮುಖ್ಯೋಪಾಧ್ಯಾಯಿನಿ ಮರ್ಜಿಯಾ ಮುಜಾಹೀದ ಮಾತನಾಡಿ
ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಆಹಾರ ಮೇಳವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯಾವಹಾರಿಕ ಜ್ಞಾನ. ನಮ್ಮ ಆಹಾರ ಪದ್ಧತಿಯ ಬಗ್ಗೆ ತಿಳುವಳಿಕೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ನಮ್ಮ ಶಾಲೆಯ ಮಕ್ಕಳು ವಿವಿಧ ಬಗೆಯ ಆಹಾರ ಪದಾರ್ಥಗಳನ್ನ ತಯಾರು ಮಾಡಿ ಮಾರಾಟ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದ ಎಲ್ಲ ಗಣ್ಯರಿಗೆ ಅಭಿನಂದಿಸುತ್ತೇವೆ ಎಂದರು.
ಈ ವೇಳೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸೈಯ್ಯದಅಮೀನ್ ಗದ್ಯಾಳ, ಪುರಸಭೆ ಸದಸ್ಯ ರಿಯಾಜ್ ಸನದಿ, ಮುಖಂಡರಾದ ಯೂನುಸ್ ಮುಲ್ಲಾ, ಆಸೀಫ್ ತಾಂಬೋಳಿ, ಶಾಲೆಯ ಸಿಇಓ. ನ್ಯಾಯವಾದಿ ಮೊಹಸ್ಸಿನ್ ಮುಜಾಹೀದ, ನಿಸಾರ್ ಶೇಖ, ದಾದಾಪೀರ ಜಮಾದಾರ, ರಫೀಕ ಶೇಖ, ಸಲೀಂ ಅರಟಾಳ, ಶಾಲೆಯ ಮುಖ್ಯೋಪಾಧ್ಯಾಯಿನಿ ಮರ್ಜಿಯಾ ಮುಜಾಹೀದ, ಬೀಬಿಬತುಲ ಮೂಲಿಮನಿ, ಹಬೀಬಾ ಶೇಖ, ಸಭಾ ಸಾಂಗಲಿಕರ, ಆಯ್ಮನ್ ಸನದಿ, ಅನ್ನಪೂರ್ಣಾ ಮುಗುಳಖೋಡ, ಶಿರೀನ್ ಮುಲ್ಲಾ, ಸಾಯಿಕಾ ಸಾತಬಚ್ಚೆ. ಅಂಜಲಿ ಸಾರವಾಡ, ಮಾಹೀಮ್ ಮುಜಾಹೀದ, ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಹ್ಮದ್ ಬಳಗಾನೂರ ನಿರೂಪಿಸಿ ವಂದಿಸಿದರು.


