ಆಳಂದ ಮತಕ್ಷೇತ್ರದ ಮತಕಳವು ಕೇಸ್‌: ಕೋಳಿ ಫಾರಂ ಕೆಲಸಗಾರರ ದುರ್ಬಳಕೆ, 100 ಕ್ಕೂ ಹೆಚ್ಚು ಸಿಮ್ ಖರೀದಿ!

Ravi Talawar
ಆಳಂದ ಮತಕ್ಷೇತ್ರದ ಮತಕಳವು ಕೇಸ್‌: ಕೋಳಿ ಫಾರಂ ಕೆಲಸಗಾರರ ದುರ್ಬಳಕೆ, 100 ಕ್ಕೂ ಹೆಚ್ಚು ಸಿಮ್ ಖರೀದಿ!
WhatsApp Group Join Now
Telegram Group Join Now

ಕಲಬುರಗಿ, ಅಕ್ಟೋಬರ್ 24: ಆಳಂದ  ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂಬ ಆರೋಪ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲು ಡೇಟಾ ಸೆಂಟರ್​ಗೆ ತಲಾ 80 ರೂಪಾಯಿಯಂತೆ ಪಾವತಿ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದ ಬೆನ್ನಲ್ಲೇ ಮತ್ತಷ್ಟು ಸ್ಪೋಟಕ ವಿಚಾರಗಳು ಬಯಲಾಗಿವೆ. ಮತ ಕಳವು ಪ್ರಕರಣದ ಪ್ರಮುಖ ಸಂಚುಕೋರ ಮೊಹಮ್ಮದ್ ಅಶ್ಫಾಕ್ ಗ್ಯಾಂಗ್ ನೂರಕ್ಕೂ ಹೆಚ್ಚು ಸಿಮ್ ಕಾರ್ಡ್ ಖರೀದಿ ಮಾಡಿದ್ದಲ್ಲದೆ, ಆಳಂದ ಸುತ್ತಮುತ್ತಲಿನ ಕೋಳಿ ಫಾರಂ ಕೆಲಸಗಾರರ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂಬುದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article