ಬಳ್ಳಾರಿ07.: ಆದಿ ಶಂಕರಾಚಾರ್ಯರ ಪರಂಪರೆಯAತೆ ಶೃಂಗೇರಿ ಶಾರದಾ ಪೀಠದ ಉಭಯ ಜಗದ್ಗುರುಗಳ ಕೃಪಾಶೀರ್ವಾದದಿಂದ ಇದೇ ಜನೆವರಿ ೨೩ ರ ಶುಕ್ರವಾರದಂದು ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಂಕರ ಶಾಖಾ ಮಠದಲ್ಲಿ ಮಕ್ಕಳ ವಿದ್ಯಾಭ್ಯಾಸದ ಶುಭಾರಂಭಕ್ಕಾಗಿ ಅಕ್ಷರಾರಂಭ ಸಂಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಡೆಯುವ ಈ ಪವಿತ್ರ ಕಾರ್ಯಕ್ರಮವು ೨೦೨೬ರ ಜನವರಿ ೨೩ನೇ ತಾರೀಖು (ಶುಕ್ರವಾರ) ಬೆಳಿಗ್ಗೆ ೭.೦೦ ಗಂಟೆಯಿAದ ಮಠದ ಆವರಣದಲ್ಲಿ ಜರುಗಲಿದೆ.
ಶ್ರೀ ಶೃಂಗೇರಿ ಶಂಕರ ಮಠ, ಸಂಗನಕಲ್ಲು ರಸ್ತೆ, ಬಳ್ಳಾರಿ ಶಾಖೆಯ ಆಶ್ರಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶುಭಾರಂಭವಾಗುವ ಉದ್ದೇಶದಿಂದ ಅಕ್ಷರಾಭ್ಯಾಸ (ಅಕ್ಷರಾರಂಭ) ಸಂಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶೃಂಗೇರಿ ಶಂಕರಮಠದ ಧರ್ಮಾಧಿಕಾರಿಗಳಾದ ಬಿ.ಕೆ.ಬಿ.ಎನ್.ಮೂರ್ತಿ ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಈ ಅಕ್ಷರಾಭ್ಯಾಸ ಸಂಸ್ಕಾರದಲ್ಲಿ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಶಾರದಾ ಮಾತೆಯ ಆಶೀರ್ವಾದದೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶುಭಾರಂಭ ಮಾಡುವ ಈ ಸಂಪ್ರದಾಯವು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ.
ಈ ಕಾರ್ಯಕ್ರಮವು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಶುಭಾರಂಭವಾಗುವ ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿ, ಶಾರದಾ ಮಾತೆಯ ಹಾಗೂ ಉಭಯ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ವ್ಯವಸ್ಥಾಪಕರಾದ ಪ್ರವೀಣ್ ಶಾಸ್ತ್ರಿ – +೯೧ ೯೯೪೫೭ ೦೬೯೨೧, ಪ್ರಧಾನ ಅರ್ಚಕರಾದ ಗುರುರಾಜ ಶರ್ಮ – +೯೧ ೯೪೯೪೧ ೩೬೪೧೬ ಇವರನ್ನು ಪೋಷಕರು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ


