ವಿಪತ್ತು ಸಂದರ್ಭದಲ್ಲಿ ಮುಂಜಾಗ್ರತಾ ಅರಿವು ಅಗತ್ಯ : ಅಜಯ್ ಕುಮಾರ್

Sandeep Malannavar
ವಿಪತ್ತು ಸಂದರ್ಭದಲ್ಲಿ ಮುಂಜಾಗ್ರತಾ ಅರಿವು ಅಗತ್ಯ : ಅಜಯ್ ಕುಮಾರ್
WhatsApp Group Join Now
Telegram Group Join Now
ಬಳ್ಳಾರಿ,ಜ.22- ಯಾವುದೇ ವಿಪತ್ತುಗಳು ಸಂಭವಿಸಿದಾಗ ತತಕ್ಷಣ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಅರಿವು ಹೊಂದಬೇಕು ಎಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ತಂಡದ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಅವರು ಹೇಳಿದರು.
ಸಿರುಗುಪ್ಪ ತಾಲ್ಲೂಕಿನ ದೇಶನೂರು ಗ್ರಾಮದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಆಯೋಜಿಸಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ 16 ಎನ್‌ಡಿಆರ್‌ಎಫ್ ತಂಡಗಳಿದ್ದು, ವಿಪತ್ತು ಸನ್ನಿವೇಶ ಎದುರಾದಾಗ ರಾಷ್ಟಿçÃಯ ವಿಪತ್ತು ನಿರ್ವಹಣಾ ತಂಡಗಳು ಸದಾ ಸಿದ್ಧರಿರುತ್ತಾರೆ. ಸಾರ್ವಜನಿಕರು ಸಹ ಅಗತ್ಯ ಸಹಕಾರ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿಯ ಪ್ರಕೃತಿ ವಿಕೋಪ ಪರಿಣಿತ ಪರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿದ್ದು, ಎನ್‌ಡಿಆರ್‌ಎಫ್ ತಂಡದ ಸದಸ್ಯರು ಪ್ರತಿ ವಿಪತ್ತುಗಳ ಕುರಿತು ಅರಿವು ಮೂಡಿಸುವರು. ವಿಪತ್ತುಗಳು ಸಂಭವಿಸಿದಾಗ ಸನ್ನದ್ಧಗೊಳಿಸಲು ಕೌಶಲ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅಭ್ಯಾಸ ಮಾಡಿಸುವರು ಹಾಗೂ ಪ್ರಥಮ ಚಿಕಿತ್ಸೆ, ಸಿಪಿಆರ್ ವಿಧಾನಗಳು ತಿಳಿಸುವರು. ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಎನ್‌ಡಿಆರ್‌ಎಫ್ ಸಿಬ್ಬಂದಿ ನಾಗರಾಜ್ ಮತ್ತು ತಂಡದ ಎಲ್ಲಾ ಸದಸ್ಯರು ಬೆಂಕಿ ಅವಘಡಗಳು, ಪ್ರವಾಹ, ಭೂಕಂಪ ಇತ್ಯಾದಿ ವಿಪತ್ತುಗಳ ಮುಂಜಾಗೃತೆ, ಸನ್ನದ್ಧತೆ ಬಗ್ಗೆ ತಿಳಿಸುತ್ತಾ ಕೆಲವು ಶಿಬಿರಾರ್ಥಿಗಳಿಂದ ಅಭ್ಯಾಸಿಸಿದರು.
ಈ ವೇಳೆ ಎನ್‌ಡಿಆರ್‌ಎಫ್ ಸಬ್ ಇನ್ಸ್ ಪೆಕ್ಟರ್ ಮುನ್ನಿಕೃಷ್ಣ, ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಡಿಜಿಎಂ ರಾಜಬಾಬು, ಸಿರುಗುಪ್ಪ ತಾಲ್ಲೂಕು ಕಂದಾಯ ನಿರೀಕ್ಷಕ ಮಂಜುನಾಥ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article