ರಾಜ್ಯದ 4 ಜಿಲ್ಲೆಗಳಲ್ಲಿ 2030ಕ್ಕೆ ವಾಯು ಮಾಲಿನ್ಯ ಶೇ38 ರಷ್ಟು ಹೆಚ್ಚಳ!

Ravi Talawar
ರಾಜ್ಯದ 4 ಜಿಲ್ಲೆಗಳಲ್ಲಿ 2030ಕ್ಕೆ ವಾಯು ಮಾಲಿನ್ಯ ಶೇ38 ರಷ್ಟು ಹೆಚ್ಚಳ!
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್​ 30: ಬೆಂಗಳೂರುಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವಾಯುಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಲು ಸಿಎಸ್ಟಿಪಿ ಎಂಬ ಸಂಸ್ಥೆ ವರದಿ ತಯಾರು ಮಾಡಿದ್ದು, ಬೆಂಗಳೂರು ನಗರವೊಂದರಲ್ಲೇ ವಾಯುಮಾಲಿನ್ಯ ಪ್ರಮಾಣ ಕಡಿಮೆ ಮಾಡಲು 3230 ಕೋಟಿ ರೂಪಾಯಿ ಬೇಕು ಎಂದು ವರದಿ ನೀಡಿದೆ.

ಕರ್ನಾಟಕದ ಮೂರು ನಗರಗಳಾದ ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ವಾಯುಮಾಲಿನ್ಯದ ಪ್ರವೃತ್ತಿಗಳು ಮತ್ತು ಸಣ್ಣ ಕಣಗಳ (PM2.5) ಸಾಂದ್ರತೆಯ ಪ್ರಕ್ಷೇಪಗಳು, ಕಾರ್ಸಿನೋಜೆನಿಕ್ ಮಾಲಿನ್ಯದ ಮಟ್ಟವು 2030ಕ್ಕೆ ಶೇ 31 ರಿಂದ 38 ರಷ್ಟು ಹೆಚ್ಚಾಗಬಹುದು ಎಂದು ವರದಿ ನೀಡಿದೆ. ವಾಯು ಮಾಲಿನ್ಯವನ್ನು ನಿಯಂತ್ರಿಸಲು ಈ ನಗರಗಳಿಗೆ ಅಂದಾಜು 582 ರಿಂದ 968 ಕೋಟಿ ರೂ. ಸರ್ಕಾರ ವ್ಯಯಿಸಬೇಕು ಎಂದು ಸಂಸ್ಥೆ ಹೇಳಿದೆ.

WhatsApp Group Join Now
Telegram Group Join Now
Share This Article