ಬಳ್ಳಾರಿ,ಜ.08..: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಮಿಷನ್ (ಗ್ರಾಮೀಣ) ಮಸೂದೆ- ೨೦೨೫ (ವಿಬಿಜಿ ಆರ್ ಎ ಎಮ್ ಜಿ) ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ನೇತೃತ್ವದಲ್ಲಿ ನೂರಾರು ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಾಧಾನಿಯವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ, ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ- ೨೦೨೫ ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಹೀನ ಪ್ರಯತ್ನವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.
ಈ ಮಸೂದೆಯ ಉದ್ದೇಶವೇನೆಂದರೆ:
ಮೊದಲನೆಯದಾಗಿ, ಎಂಜಿ ನರೇಗಾ ಕಾಯ್ದೆಯನ್ನು ಮತ್ತು ಅದರಲ್ಲಿದ್ದ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ತೆಗೆದುಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನದ ಖಾತ್ರಿ ನೀಡದಿರುವುದು.
ಎರಡನೆಯದಾಗಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರವನ್ನು ನಿರಾಕರಿಸುತ್ತಾ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡುವುದು.
ಮೂರನೆಯದಾಗಿ, ಕೇಂದ್ರ ಬಿಜೆಪಿ ಸರ್ಕಾರದ ಹಣಕಾಸಿನ ಜವಾಬ್ದಾರಿಯನ್ನು ಶೇ.೬೦ ಕ್ಕೆ (ಹಿಂದೆ ಶೇ.೧೦೦) ಇಳಿಸುವುದು ಮತ್ತು ಅದರ ಶೇ.೪೦ ರಷ್ಟು ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುವುದು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಜಾಬ್ ಕಾರ್ಡ್ಗಳನ್ನು ಸುಧಾರಣೆ ಮಾಡುವ ಘೋಷಣೆಯ ಮೂಲಕ ಗ್ರಾಮೀಣ ಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು.
ಈಗ ಗ್ರಾಮೀಣ ಬಡ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಒದಗಿಸುವುದು ಘಳಿಗೆಯ ಅವಶ್ಯಕತೆ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿರುವಾಗ, ಸರ್ಕಾರ ಅದಕ್ಕೆ ಸಂಪೂರ್ಣವಾಗಿ ವಿರುದ್ಧ ಗತಿಯಲ್ಲಿ ನಡೆದಿದೆ.
ಈ ಪ್ರಸ್ತಾಪಿತ ಮಸೂದೆಯು ಗ್ರಾಮೀಣ ಬಡ ಜನತೆಯ ಬದುಕುವ ಹಕ್ಕಿನ ಮೇಲಿನ ದಾಳಿ ಆಗಿರುವುದರಿಂದ ಅದನ್ನು ತೀರ್ವವಾಗಿ ಖಂಡಿಸುತ್ತೇವೆ,
ಕೇAದ್ರ ಬಿಜೆಪಿ ಸರ್ಕಾರದ ಈ ಜನ ವಿರೋಧಿ, ಕಾರ್ಮಿಕ ವರ್ಗ ವಿರೋಧಿ ಪ್ರಯತ್ನವನ್ನು ಸೋಲಿಸಲು ಕೊನೆಯವರೆಗೂ ಹೋರಾಡಲು ಮುಂದೆ ಬರಬೇಕೆಂದು ದುಡಿಯುವ ಜನರಿಗೆ ಎ ಐ ಕೆ ಕೆ ಎಂ ಎಸ್ ನಾಯಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ ಮಾತನಾಡಿದರು, ಎಐಕೆಕೆಎಂಎಸ್ ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ , ಕಾರ್ಯದರ್ಶಿ ಬಸವರಾಜ, ರೈತ ಮುಖಂಡ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಸಮಿತಿ ಸದಸ್ಯರಾದ ಮಾಬು ಸಾಬ್, ಹೊನ್ನೂರಪ್ಪ, ಕೂಲಿ ಕಾರ್ಮಿಕರಾದ ಸೋಮಲಾಪುರದ ನೀಲಮ್ಮ, ಎಸ್.ನಾಗಲಕ್ಷ್ಮೀ, ಖಾಧರ್ ಸಾಬ್, ವೆಂಕಟೇಶ್, ಈರಣ್ಣ, ಎಸ್.ವೆಂಕಟೇಶ್, ತಾಯಮ್ಮ, ಮಾರೆಮ್ಮ, ಹ.ಗೌರಮ್ಮ , ಸೇರಿದಂತೆ ಇತರೆ ನಾಯಕರು, ರೈತರು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.


