ಪಿಪಿಪಿ ಮಾದರಿಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಕ್ರಮಕ್ಕೆ ಎಐಡಿಎಸ್‌ಓ ಖಂಡನೆ

Ravi Talawar
ಪಿಪಿಪಿ ಮಾದರಿಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಕ್ರಮಕ್ಕೆ ಎಐಡಿಎಸ್‌ಓ ಖಂಡನೆ
WhatsApp Group Join Now
Telegram Group Join Now
 ಬಳ್ಳಾರಿ: ಸಾರ್ವಜನಿಕ-ಖಾಸಗಿ ಸಹಭಾಗಿತ್ವ (Public–Private Partnership – PPP) ಮಾದರಿಯಲ್ಲಿ ಆರು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರವು ಯೋಚಿಸಿದೆ ಎಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಶರಣ ಪ್ರಕಾಶ್ ಪಾಟೀಲ್ ಅವರು ನೀಡಿರುವ ಹೇಳಿಕೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ.
ಈ ಪ್ರಸ್ತಾವನೆಯು ಶಿಕ್ಷಣದ, ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟೀಕರಣದ ಮತ್ತೊಂದು ಹೆಜ್ಜೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿರುವ ಪಿಪಿಪಿ ಮಾದರಿಯು ಸಾರ್ವಜನಿಕ ಸಂಪನ್ಮೂಲಗಳನ್ನು ಖಾಸಗಿ ಲಾಭಕೋರರಿಗೆ ಹಸ್ತಾಂತರಿಸುವ ಒಂದು ಸಾಧನವಷ್ಟೇ ಆಗಿದೆ. ದೇಶಾದ್ಯಂತದ ಸಾಭೀತಾಗಿರುವಂತೆ, ಇಂತಹ ಮಾದರಿಗಳು ಅತಿ ಹೆಚ್ಚಿನ ಶುಲ್ಕಗಳು, ಶೈಕ್ಷಣಿಕ ಗುಣಮಟ್ಟದ ಕುಸಿತ, ಮತ್ತು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆಗೆ ಕಾರಣವಾಗುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಶಿಕ್ಷಣ — ಅದರಲ್ಲೂ ವೈದ್ಯಕೀಯ ಶಿಕ್ಷಣವು — ಮಾರಾಟದ ಸರಕಲ್ಲ, ಬದಲಿಗೆ ಸರ್ಕಾರವೇ ಖಾತ್ರಿಪಡಿಸಬೇಕಾದ ಸಾಮಾಜಿಕ ಹಕ್ಕಾಗಿದೆ. ಕಾರ್ಪೊರೇಟ್ ಲಾಬಿಗಳು ಮತ್ತು ವಿಶ್ವಬ್ಯಾಂಕ್-ಚಾಲಿತ ಒತ್ತಡಕ್ಕೆ ಮಣಿಯುವ ಬದಲು, ಸರ್ಕಾರವು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಸಾರ್ವಜನಿಕ ಖಜಾನೆಯಿಂದ ಸೂಕ್ತ ನಿಧಿಯನ್ನು ಹಂಚಿಕೆ ಮಾಡಬೇಕು.
ಈ ಜನವಿರೋಧಿ ಕ್ರಮವನ್ನು ಪ್ರತಿರೋಧಿಸಲು ಮತ್ತು ಎಲ್ಲಾ ಹೊಸ ವೈದ್ಯಕೀಯ ಕಾಲೇಜುಗಳನ್ನು ಕೇವಲ ಸಾರ್ವಜನಿಕ ಒಡೆತನ ಹಾಗೂ ಪ್ರಜಾತಾಂತ್ರಿಕ ನಿಯಂತ್ರಣದ ಅಡಿಯಲ್ಲಿ ಸ್ಥಾಪಿಸಿ ನಡೆಸಬೇಕೆಂದು ಒತ್ತಾಯಿಸಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜದ ಎಲ್ಲಾ ಪ್ರಗತಿಪರ ಜನಸಮೂಹಕ್ಕೆ ಎಐಡಿಎಸ್‌ಓ ಕರೆ ನೀಡುತ್ತದೆ.
WhatsApp Group Join Now
Telegram Group Join Now
Share This Article