ಚೆನ್ನೈ, ಮಾರ್ಚ್ 31: ಬಿಜೆಪಿ ನಾಯಕ ಕೆ. ಅಣ್ಣಾಮಲೈಅವರಿಂದ ನಡೆಯುತ್ತಿರುವ ಅಗೌರವವನ್ನು ಉಲ್ಲೇಖಿಸಿ ಎಐಎಡಿಎಂಕೆ 2024ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತ್ತು. ಆದರೆ, ಕಳೆದ ವಾರ ಇಪಿಎಸ್ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು. ಈ ಮೂಲಕ 2023ರಲ್ಲಿ ಅವರ ವಿಭಜನೆಯ ನಂತರ ಮತ್ತೆ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟದ ಬಗ್ಗೆ ವದಂತಿಗಳು ಹರಿದಾಡುತ್ತಿವೆ.
ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಚಿಸಲಾಗುವ ಮೈತ್ರಿಕೂಟದ ಆಕಾರ ಮತ್ತು ರೂಪದ ಬಗ್ಗೆ ಪಕ್ಷದ ಕೇಂದ್ರ ನಾಯಕತ್ವವು “ಸೂಕ್ತ ನಿರ್ಧಾರ” ತೆಗೆದುಕೊಳ್ಳುತ್ತದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿದ್ದಾರೆ. 2024ರಲ್ಲಿ ಎಐಎಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ತೊರೆಯಲು ಅಣ್ಣಾಮಲೈ ಅವರೇ ಕಾರಣವೆಂದು ಪರಿಗಣಿಸಲಾಗಿತ್ತು. ಇದೀಗ ಮತ್ತೆ ಮೈತ್ರಿಯ ಮಾತುಕತೆ ನಡೆದ ನಂತರ ಅಣ್ಣಾಮಲೈ ಎಐಎಡಿಎಂಕೆ ಬಗೆಗಿನ ತಮ್ಮ ನಿಲುವು ಸಡಿಲಗೊಳಿಸಿದ್ದಾರೆ.