ವಿಜಯಪುರ : ಅಹಿಂದ ರಾಜ್ಯ ಒಕ್ಕೂಟ, ಬೆಂಗಳೂರು ಹಮ್ಮಿಕೊಂಡಿದ್ದ ಅಹಿಂದ ಸಮಾವೇಶದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಅಹಿಂದ ಮುಖಂಡರು ಹಾಗೂ ವಿಜಯಪುರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾದ ಹಾಗೂ ಅಹಿಂದ ರಾಜ್ಯ ಉಪಾದ್ಯಕ್ಷರಾದ ರಾಜಕುಮಾರ ಬಿ. ಕಂಬಾಗಿ ಇವರಿಗೆ ಅಹಿಂದ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರಾಜಕುಮಾರ ಕಂಬಾಗಿ ಇವರು ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಕುರುಬರ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದ ವಿಶೇಷ ಪ್ರಯತ್ನದಿಂದ ಜಿಲ್ಲೆಯಲ್ಲಿ ಕುರುಬರ ಸಂಘವು ಬೆಳೆಯುವಲ್ಲಿ ಸಹಕಾರಿ ಆಗಿ, ಅಹಿಂದ ವರ್ಗಕ್ಕೆ ಅನ್ಯಾಯಕ್ಕೊಳಗಾದ ಸಮಯದಲ್ಲಿ ಹೋರಾಟಗಳನ್ನು ಹಮ್ಮಿಕೊಂಡು ಅಹಿಂದ ವರ್ಗಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮದೇ ಆದ ವಿಶೇಷ ಸೇವೆಯಲ್ಲಿ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಈ ಸೇವೆಯನ್ನು ಪರಿಗಣಿಸಿ ಈ ಸಮಯದಲ್ಲಿ ಅಹಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ಕ.ಅ.ರಾ.ಅಧ್ಯಕ್ಷರಾದ ಪ್ರಭುಲಿಂಗ ದೊಡ್ಡಿನ, ಅಹಿಂದ ರಾಜ್ಯ ಗೌರವಾದ್ಯಕ್ಷರಾದ ಸಿದ್ದಣ್ಣ ತೇಜಿ, ಶರಬಯ್ಯಾ ಸ್ವಾಮೀಜಿ, ರಾಜ್ಯದ ಅಹಿಂದ ಎಲ್ಲ ಜಿಲ್ಲೆಯ ಅಧ್ಯಕ್ಷರು, ಹಾಗೂ ಮಹಿಳಾ ಪದಾಧಿಕಾರಿಗಳು, ಉಪಸ್ಥಿತರಿದ್ದರು.


