ಮತ್ತಿಕೊಪ್ಪದಲ್ಲಿ ಕೃಷಿ ಉತ್ಸವ: ದೇಸಿ ಡಿಪ್ಲೋಮಾ ಪದವಿ ಪ್ರದಾನ ಮತ್ತು ನೂತನ ಕೋರ್ಸ್ ಉದ್ಘಾಟನೆ

Ravi Talawar
ಮತ್ತಿಕೊಪ್ಪದಲ್ಲಿ ಕೃಷಿ ಉತ್ಸವ: ದೇಸಿ ಡಿಪ್ಲೋಮಾ ಪದವಿ ಪ್ರದಾನ ಮತ್ತು ನೂತನ ಕೋರ್ಸ್ ಉದ್ಘಾಟನೆ
WhatsApp Group Join Now
Telegram Group Join Now
ನೇಸರಗಿ: ಐಸಿಎಆರ್- ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ದಿನಾಂಕ ೦೭.೮.೨೫ ರಂದು ಭಾರತ ಸರ್ಕಾರ, ಒಂಓಂಉಇ ಹೈದರಾಬಾದ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, SಂಒಇಖಿI (ಉತ್ತರ), ಕೃಷಿ ಇಲಾಖೆ-ಂಖಿಒಂ ಯೋಜನೆ ಬೆಳಗಾವಿ, ಕೃಷಿ ಮಹಾವಿದ್ಯಾಲಯ ಧಾರವಾಡ ಹಾಗೂ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಹಯೋಗದಲ್ಲಿ ಡಿಪ್ಲೋಮಾ ಪದವಿ (ಆಂಇSI) ಕೋರ್ಸ್ ಉದ್ಘಾಟನೆ ಹಾಗೂ ಪ್ರಮಾಣ ಪತ್ರಗಳ ವಿತರಣೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ತರಬೇತಿ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭ ಶಿಬಿರದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯ ಸಚೇತಕರು, ವಿಧಾನ ಪರಿ?ತ್, ಬೆಂಗಳೂರು ಹಾಗೂ ಕೆಎಲ್‌ಇ ಸಂಸ್ಥೆ, ಬೆಳಗಾವಿ ನಿರ್ದೇಶಕರಾದ ಶ್ರೀ ಮಹಾಂತೇಶ ಕವಟಗಿಮಠ ಇವರು ತಮ್ಮ ಅಧ್ಯಕ್ಷೀಯ ಭಾ?ಣದಲ್ಲಿ ರೈತ ತೊಂದರೆಯಲ್ಲಿದ್ದಾಗ ಸರ್ಕಾರ ನೆರವಿಗೆ ಬರಬೇಕು.  ವೈಜ್ಞಾನಿಕ ಬೆಲೆ ಸಿಗಬೇಕು. ಕೃಷಿ ಪರಿಕರ ವಿತರಕರು  ವ್ಯಾಪಾರದ ಜೊತೆಗೆ ರೈತರಿಗೆ ಸ್ನೇಹಿತರಾಗಿ ಸರ್ಕಾರದ ಯೋಜನೆಗಳ ಕುರಿತು ತಿಳಿಸಬೇಕು ಎಂದರು.
ಪ್ರತಿ ಹನಿ ನೀರಿಗೆ ಹೆಚ್ಚು ಉತ್ಪನ್ನ ಬರಬೇಕು.  ಹವಾಮಾನ ವೈಪರೀತ್ಯದಿಂದ ಮೋಡ ಒಡೆಯುವಿಕೆ ಆಗುತ್ತಿದೆ.  ಬಿದ್ದ ನೀರಿನ ಹನಿಯನ್ನು ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಾಗಿ  ಕೆರೆಗಳಲ್ಲಿ ನೀರಿನ ಸಂಗ್ರಹವಾಗುತ್ತಿದೆ.  ಇಸ್ರೇಲ್ ನಲ್ಲಿ ಮೂರು ವ?ಕ್ಕೊಮ್ಮೆ ಮಳೆಯಾಗುತ್ತದೆ.  ಭಾರತದಲ್ಲಿ ಪ್ರತಿವ? ಮಳೆಯಾಗುತ್ತದೆ.  ಆದರೆ ನೀರನ್ನು ಸಂರಕ್ಷಣೆ ಮಾಡುತ್ತಿಲ್ಲ. ಹನಿ ನೀರಾವರಿ ಅಳವಡಿಸಿಕೊಳ್ಳಬೇಕು.  ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ಅತಿಯಾದ ಕೀಟನಾಶಕ ಬಳಕೆಯಿಂದ ಆರೋಗ್ಯದ ಮೇಲೆ ದು?ರಿಣಾಮ ಬೀರುತ್ತಲಿದೆ. ಪಂಜಾಬ ರಾಜ್ಯದಲ್ಲಿ ೭೫% ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕ ಘನ ಸರ್ಕಾರದಿಂದ ಕೆಎಲ್‌ಇ ಸಂಸ್ಥೆಗೆ ಬಿ.ಎಸ್ಸಿ (ಕೃಷಿ) ಮಹಾವಿದ್ಯಾಲಯದ ಸ್ಥಾಪನೆಗೆ ಮಂಜೂರಾತಿ ದೊರೆತಿದೆ.ಇದರ ಸಂಪೂರ್ಣ ಶ್ರೇಯಸ್ಸು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರಿಗೆ ಸಲ್ಲುತ್ತದೆ ಮತ್ತು ಕೃಷಿ ಮಹಾವಿದ್ಯಾಲಯವನ್ನು ಇಡೀ ಭಾರತದಲ್ಲಿಯೇ ಮಾದರಿಯನ್ನಾಗಿ ಮಾಡುವುದು ಪ್ರಭಾಕರ ಕೋರೆಯವರ ಮಹದಾಶೆಯಾಗಿದೆ ಎಂದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ.ಎಲ್ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೃಷಿ ವಿದ್ಯಾರ್ಥಿಗಳು ತಾವು ಪಡೆದ ಜ್ಞಾನವನ್ನು ಒರೆಗಲ್ಲಿಗೆ ಹಚ್ಚಿ ರೈತ ಸಮುದಾಯಕ್ಕೆ ತಂತ್ರಜ್ಞಾನ ವರ್ಗಾವಣೆಗೆ ಶ್ರಮಿಸಲು ಕೋರಿದರು.   ದೇಶವು ಎಣ್ಣೆ ಕಾಳು ಆಮದು ಮಾಡಿಕೊಳ್ಳುತ್ತಿದ್ದು, ಹೆಚ್ಚು ಹೆಚ್ಚು ಎಣ್ಣೆ ಕಾಳು ಬೆಳೆದು ಸ್ವಾವಲಂಬಿಗಳಾಗಲು ಕರೆ ನೀಡಿದರು.
ಕೃವಿವಿ, ಧಾರವಾಡದ ವಿಸ್ತರಣಾ ನಿರ್ದೇಶಕರಾದ ಡಾ. ಎಮ್. ವ್ಹಿ. ಮಂಜುನಾಥ ಅವರು ರೈತರಿಗೆ ತಂತ್ರಜ್ಞಾನವನ್ನು ಒದಗಿಸುವಲ್ಲಿ ಕೃಷಿ ಪರಿಕರ ವಿತರಕರು ಬಹುಮುಖ್ಯ ಪಾತ್ರವಹಿಸುತ್ತಾರೆ ಹಾಗೂ ಅವರು ಮೊಟ್ಟಮೊದಲ ವಿಸ್ತರಣಾ ಕಾರ್ಯಕರ್ತರಾಗಿದ್ದಾರೆ. ಕೇವಲ ಲಾಭವನ್ನೇ ಪರಿಗಣಿಸದೆ ರೈತರ ಹಿತಾಸಕ್ತಿಯೊಂದಿಗೆ ಪರಿಸರ ಕಾಳಜಿಯನ್ನು ಪ್ರದರ್ಶಿಸಬೇಕೆಂದು ವಿನಂತಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಪ್ರಾಸ್ತಾವಿಕ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಪರಿಕರ ವಿತರಕರಿಗೆ ಈಗಾಗಲೇ ಐದು ತರಬೇತಿ ಶಿಬಿರಗಳನ್ನು ಪೂರ್ಣಗೊಳಿಸಿ ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಈಗ ನಾಲ್ಕನೇಯ ತಂಡದ ಪರಿಕರ ವಿತರಕರಿಗೆ ತರಬೇತಿಯನ್ನು ಆಯೋಜಿಸಲಾಗುತ್ತಿದ್ದು ಕೇಂದ್ರದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಡಿಪ್ಲೋಮಾ ಪದವಿ (ಆಂಇSI) ಕೋರ್ಸ್‌ನಲ್ಲಿ ಮಲ್ಲಿಕಾರ್ಜುನ ಗೋಮಾಡಿ ಬಂಗಾರ, ಮಂಜುನಾಥ ಶಿಂತ್ರಿ ಇವರಿಗೆ ರಜತ ಹಾಗೂ ರೋಹಿತ ಪಾಟೀಲ ಇವರಿಗೆ ಕಂಚಿನ ಪ್ರಮಾಣ ಪ್ರತಗಳನ್ನು ವಿತರಿಸಲಾಯಿತು. ಸಮಗ್ರ ಪೋ?ಕಾಂಶಗಳ ನಿರ್ವಹಣೆ ತರಬೇತಿಯಲ್ಲಿ ಪ್ರಫುಲ ಪಾಟೀಲ, ಶ್ರೀಶೈಲ ಅಗ್ನೇಪ್ಪಗೋಳ ಹಾಗೂ ಶ್ರೀಶೈಲ ಮಗದುಮ್ ಇವರಿಗೆ ನೀಡಲಾಯಿತು.
ಕೃವಿವಿ, ಧಾರವಾಡದ ಪ್ರಾಧ್ಯಾಪಕರು ಹಾಗೂ ರಾಜ್ಯ ನೋಡಲ್ ಅಧಿಕಾರಿಗಳು ದೇಸಿ & ಸಮೇತಿ (ಉತ್ತರ), ಡಾ. ಎಸ್. ಎನ್. ಜಾಧವ ಇವರು ಪ್ರಮಾಣ ವಚನ ಬೋಧಿಸಿದರು. ಡಾ. ಶ್ರೀಮತಿ ನಿತ್ಯಶ್ರೀ ಪ್ರಾಧ್ಯಾಪಕರು ಹಾಗೂ ಸಂಯೋಜಕರು ಕೃಷಿ ಮಹಾವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಮುಂತಾದವರು ರೈತರೊಂದಿಗೆ ಸಂವಾದಿಸಿದರು. ಬಿ. ಎಸ್ಸಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಅಭಿ?ಕ ಚವ್ಹಾಣ ವಂದಿಸಿದರು.
WhatsApp Group Join Now
Telegram Group Join Now
Share This Article