ಬೆಂಗಳೂರು, ಅಕ್ಟೋಬರ್ 04: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯಿಂದ 50 ಕೋಟಿ ರೂ. ಬೇಡಿಕೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆಂದು ಗಂಭೀರ ಆರೋಪ ಮಾಡಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಈಗಾಗಲೇ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅವರು, ಎಫ್ಐಆರ್ ದಾಖಲಾದ ಬಳಿಕ ಅವರಿಗೆ ನಾನು ಯಾರು ಅಂತ ಗೊತ್ತಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉದ್ಯಮಿ ವಿಜಯ್ ಟಾಟಾ, ಇಂದು ನನ್ನ ಮುಖದಲ್ಲಿ ನಗು ಇದೆ. ಇಂದು ಖುಷಿ ಆಗುತ್ತಿದೆ. ನನ್ನ ಎಫ್ಐಆರ್ ಆದ ಮೇಲೆ ಅವರು ದೂರು ಕೊಟ್ಟಿದ್ದಾರೆ. ಮೊದಲು ಯಾರೂ ಅಂಥ ಗೊತ್ತಿಲ್ಲ ಅಂಥ ಹೇಳಿದ್ದರು. ಈಗ ಅವರಿಗೆ ನಾನು ಯಾರು ಅಂಥ ಗೊತ್ತಿದೆ ಎಂದು ಸಾಬೀತಾಯಿತು ಎಂದಿದ್ದಾರೆ.