ನವದೆಹಲಿ, ಅಕ್ಟೋಬರ್ 24: ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಅಫ್ಘಾನಿಸ್ತಾನ ಕೂಡ ಈಗ ಗಡಿಯಾಚೆಗಿನ ನದಿಗಳಿಂದ ಪಾಕಿಸ್ತಾನಕ್ಕೆ ನೀರನ್ನು ನಿರ್ಬಂಧಿಸಲು ನಿರ್ಧರಿಸಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೊಡಗಿದ ಕೆಲವೇ ವಾರಗಳ ನಂತರ ಕಾಬೂಲ್ ಕುನಾರ್ ನದಿಗೆ ಸಾಧ್ಯವಾದಷ್ಟು ಬೇಗ ಅಣೆಕಟ್ಟು ನಿರ್ಮಿಸುವುದಾಗಿ ತಾಲಿಬಾನ್‌ನ ಸರ್ವೋಚ್ಚ ನಾಯಕ ಘೋಷಿಸುವ ಮೂಲಕ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಭಾರತ ಬಳಿಕ ಅಫ್ಘಾನ್ ಕೂಡ ಪಾಕ್‌ಗೆ ನೀರು ಬಿಡದಿರಲು ನಿರ್ಧಾರ

ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಡುರಾಂಡ್ ರೇಖೆಯ ಉದ್ದಕ್ಕೂ ತನ್ನ ಗಡಿ ಪ್ರದೇಶಗಳ ಮೇಲೆ ದಾಳಿ ಮಾಡಿದ ನಂತರ, ತಾಲಿಬಾನ್ ಸರ್ಕಾರವು ಕುನಾರ್ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ನಿಲ್ಲಿಸಲು ನಿರ್ಧರಿಸಿದೆ. ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ (ಐಇಎ) ಸರ್ವೋಚ್ಚ ನಾಯಕ ಕುನಾರ್ ನದಿಯಲ್ಲಿ ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ನಿಜವೇ ಆದರೆ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ಎದುರಾಗುವುದರಲ್ಲಿ ಅನುಮಾನವೇ ಇಲ್ಲ.ಕುನಾರ್ ನದಿಯ ಮೇಲೆ ಸಾಧ್ಯವಾದಷ್ಟು ವೇಗವಾಗಿ ಅಣೆಕಟ್ಟು ನಿರ್ಮಿಸುವ ಆದೇಶವನ್ನು ತಾಲಿಬಾನ್ ಸುಪ್ರೀಂ ನಾಯಕ ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾದಾ ಅವರು ನೀಡಿದ್ದಾರೆ.

