ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಇದರ ದುರಸ್ಥಿ ಕಾರ್ಯ ಯಶಸ್ವಿಯಾದ ಬೆನ್ನಲ್ಲೇ ವಿಜಯನಗರ ಜಿಲ್ಲೆಯ ಜಲಾಶಯದಲ್ಲಿ ಇಂತಹುದೇ ಬೆಳವಣಿಗೆ ಕಂಡು ಬಂದಿದೆ.
ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಮಾಲವಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದಬಂದಿದ್ದು, ಜಲಾಶಯದ 9ನೇ ಗೇಟ್ ದುರಸ್ತಿಯಾಗದೆ, ನೀರು ಸಂಗ್ರಹಣೆಗೆ ಹಾಕಲಾಗಿದ್ದ ಒಡ್ಡು ಒಡೆದಿದೆ. ಇದರಿದ ಬಹುಪಾಲು ನೀರು ವ್ಯರ್ಥವಾಗಿ ಹರಿದು ಹೋಗಿದೆ.
ಜಲಮೂಲಗಳಿಂದ ಒಟ್ಟು 2ಟಿಎಂಸಿಯಷ್ಟು ನೀರು ಸಂಗ್ರಹವಾಗುವ ಜಲಾಶಯದಿಂದ ಸುತ್ತಲಿನ ಹಲವು ಗ್ರಾಮಗಳಲ್ಲಿಅಂತರ್ಜಲ ಹೆಚ್ಚುವ ಜತೆಗೆ 16ಸಾವಿರ ಎಕರೆ ಪ್ರದೇಶ ನೀರಾವರಿಯಾಗಲಿದೆ. ಆದರೆ, ಜಲಾಶಯದ 9ನೇ ಗೇಟ್‌ಗೆ ದುರಸ್ತಿಗೆ 4.02 ಕೋಟಿ ರೂ.ಅನುದಾನವಿದ್ದರೂ ವರ್ಷದಿಂದ ಬಳಕೆಯಾಗದಿರುವುದು, ದುರಸ್ತಿ ಕೈಗೆತ್ತಿಕೊಳ್ಳದಿರುವುದು ಸಮಸ್ಯೆಯ ಮೂಲವಾಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿರುವ ಮಾಲವಿ ಜಲಾಶಯವನ್ನು 1972 ರಲ್ಲಿ ನಿರ್ಮಿಸಲಾಗಿದೆ. ಜಲಾಶಯವು ಒಟ್ಟು 10 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದ್ದು, ಇದು ತಾಲ್ಲೂಕಿನ ನೀರಾವರಿಗೆ ಮತ್ತು ತುಂಗಭದ್ರಾ ಅಣೆಕಟ್ಟಿಗೆ ಪ್ರಮುಖ ನೀರಿನ ಮೂಲವಾಗಿದೆ.
ಕಳೆದ ಕೆಲವು ವರ್ಷಗಳಿಂದ, ಕ್ರೆಸ್ಟ್ ಗೇಟ್‌ಗಳನ್ನು ನವೀಕರಿಸಬೇಕೆಂದು ಆಡಳಿತ ಮಂಡಳಿಗೆ ರೈತರು ಮನವಿ ಮಾಡುತ್ತಲೇ ಬಂದಿದ್ದಾರೆ.
ಹಗರಿಬೊಮ್ಮನಹಳ್ಳಿಯ ಸೋಮಶೇಖರ್ ನಾಯಕ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಕ್ರೆಸ್ಟ್ ಗೇಟ್‌ಗಳ ದುರಸ್ತಿಗಾಗಿ ರಾಜ್ಯ ಸರ್ಕಾರ ಮತ್ತು ವಿಜಯನಗರ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಕ್ರೆಸ್ಟ್ ಗೇಟ್‌ಗಳಿಂದ ಹೊರಹರಿವಾಗುತ್ತಿಲ್ಲ. ಕ್ರೆಸ್ಟ್ ಗೇಟ್ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.