ಜೈನ ತತ್ವಶಾಸ್ತ್ರ ಅಳವಡಿಕೆ ಅತ್ಯುತ್ತಮ ಜೀವನದ ದಾರಿ: ವಿನೋದ ದೊಡ್ಡಣ್ಣವರ

Ravi Talawar
ಜೈನ ತತ್ವಶಾಸ್ತ್ರ ಅಳವಡಿಕೆ ಅತ್ಯುತ್ತಮ ಜೀವನದ ದಾರಿ: ವಿನೋದ ದೊಡ್ಡಣ್ಣವರ
WhatsApp Group Join Now
Telegram Group Join Now

ಬೆಳಗಾವಿ.ಮೇ 08: ಜೈನ ಧರ್ಮ ಇದೊಂದು ಕೇವಲ ಧರ್ಮವಾಗದೆ ಉತ್ತಮ ಜೀವನಶೈಲಿಯ ಜ್ಞಾನ ನೀಡುವ ತತ್ವಶಾಸ್ತ್ರಗಳನ್ನು ಹೊಂದಿದ ಧರ್ಮವಾಗಿದೆ. ಜೈನ ತತ್ವಶಾಸ್ತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅತ್ಯುತ್ತಮ ಜೀವನದ ದಾರಿಯಾಗಲಿದೆ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.

ಬುಧವಾರದಂದು ಬೆಳಗಾವಿ ಅನಿಗೋಳದ ಶ್ರೀ ಆದಿನಾಥ ಭವನದಲ್ಲಿ ಜೈನ ಆಗಮ ಮಿಷನ ವತಿಯಿಂದ ಆಯೋಜಿಸಲಾದ ೮ ನೇ ಧಾರ್ಮಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡಿ ವಿಶ್ವದಲ್ಲಿ ಜೈನ ತತ್ವಜ್ಞಾನ ಮತ್ತು ತತ್ವಶಾಸ್ತ್ರಗಳ ಬಗ್ಗೆ  ಅಧ್ಯಯನಗಳು ನಡೆಯುತ್ತಿವೆ. ಅನಾದಿ ಕಾಲದಿಂದಲೂ ಸಹ ಜೈನ ತತ್ವಶಾಸ್ತ್ರ ಅನುಕರಣೆಯಲ್ಲಿದೆ.

ಇಂದು ಅನೇಕ ಹಿರಿಯ ಅಧಿಕಾರಿಗಳು, ಸಾಹಿತಿಗಳು , ವಿಜ್ಞಾನಿಗಳು ಚಲನಚಿತ್ರ ನಟರು ಸೇರಿದಂತೆ ಅನೇಕರು ಜೈನ ತತ್ವಶಾಸ್ತ್ರಗಳನ್ನು ಪಾಲಿಸುತ್ತ
ಯಶಸ್ವಿ ಜಿವನ ನಡೆಸುತ್ತಿದ್ದಾರೆಂದು ಅವರು ಹೇಳಿದರು.

ಇಂದು ಧಾರ್ಮಿಕ ಶೀಕ್ಷಣ ಎಲ್ಲಿಯೂ ಸಿಗುತ್ತಿಲ್ಲ . ಬೆಳಗಾವಿ ಅನಗೋಳ ಭಾಗದ ಶ್ರಾವಕರು ಕಳೆದ ೮ ವರ್ಷಗಳಿಂದ ಧಾರ್ಮಿಕ ಶಿಕ್ಷಣ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಈ ಕಾರ್ಯ ಶ್ಲಾಘನೀಯವಾಗಿದೆ,. ಇಂತಹ ಕಾರ್ಯಗಳು ಮುಂದೆಯು ನಡೆಯಲಿ ಎಂದು ಅವರು ಹಾರೈಸಿದರು.

ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಧಾರ್ಮಿಕ ಶೀಕ್ಷಣ ನೀಡುವುದು ಅಗತ್ಯವಾಗಿದೆ. ಈ
ಧಾರ್ಮಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯಲು ಸಹಕಾರಿಯಾಗುತ್ತವೆ. ಇಂದಿನ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದ ಅವರು ಈ ಶಿಬರವನ್ನು ಆಯೋಜಿಸಿದ ಆಯೋಜಕರ ಪ್ರಯತ್ನಕ್ಕೆ ಯಶಸ್ಸು ದೊರೆಯಲಿ ಎಂದು ಅವರು ಹೇಳಿದರು.

ಸಮಾರಂಭದ ವೇದಿಕೆ ಮೇಲೆ ಕೆಪಿಸಿಸಿ ಸದಸ್ಯ ಸುನಿಲ ಹನಮಣ್ಣವರ, ಪ್ರಮೋದ ಪಾಟೀಲ, ರಾಜಶೇಖರ ಭೇಂಡಿಗೇರಿ ,ವಿಕಾಸ ಜೈನ, ರಿತಿಕ
ಜೈನ, ವಿಶೇಷ ಜೈನ, ಸುಬ್ರತ ಜೈನ, ಪುಷ್ಪಕ ಹನಮಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ರಾಜು ಹನಮಣ್ಣವರ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮಿಥುನ ಶಾಸ್ತ್ರಿ ಮತ್ತು ಅನೇಕಾಂತ ಶಾಸ್ತ್ರಿಗಳು ಧಾರ್ಮಿಕ ಶಿಕ್ಷಣ ಶಿಬಿರವನ್ನು ನಡೆಸಿ ಜೈನ ಧರ್ಮದ ಆಗಮ, ಆಚರಣೆ, ನಿಯಮಾವಳಿಗಳ ಬಗ್ಗೆ ಶಿಕ್ಷಣ ನೀಡಿದರು. ಈ ಶಿಬಿರದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಧಾರ್ಮಿಕ ಶಿಕ್ಷಣ ಪಡೆದರು.

ನಿಗೋಳ ಆಧಿನಾಥ ಭವನದಲ್ಲಿ ಆಯೋಜಿಸಲಾದ ಜೈನ ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ ವಿನೋದ ದೊಡ್ಡಣ್ಣವರ ಅವರು ಶಿಬಿರಾರ್ಥಿಗಳಿಗೆ ಧಾರ್ಮಿಕ ಪುಸ್ತಕವನ್ನು
ವಿತರಿಸಿದರು. ರವಿರಾಜ ಪಾಟೀಲ ಪ್ರಮೋದ ಪಾಟೀಲ,ಸುನಿಲ ಹನಮಣ್ಣವರ, ರಾಜಶೇಖರ ಭೆಂಡಿಗೇರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article