ಚ. ಕಿತ್ತೂರು. ಜೀವನದಲ್ಲಿ ಮಹಿಳೆಯರು ತಾಯಿ ಕಿತ್ತೂರು ಚನ್ನಮ್ಮ ಅವರ ಶೌರ್ಯ, ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಬರಬೇಕೆಂದು ಕೆಪಿಸಿಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಹೇಳಿದರು.
ಅವರ ಶುಕ್ರವಾರದಂದು ಕಿತ್ತೂರು ಉತ್ಸವದ ಪ್ರಯುಕ್ತ ಪಟ್ಟದದ ಉತ್ಸವದ ಮುಖ್ಯ ವೇದಿಕೆಯಲ್ಲಿ ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ಆಂಗ್ಲ ಭಾಷಾ ಲೇಖಕರು, ವಿದ್ವಾಂಸರಾದ ಡಾ. ವಿಜಯಲಕ್ಷ್ಮಿ ತಿರ್ಲಾಪುರ ಮಾತನಾಡಿ ಚನ್ನಮ್ಮಾಜಿ ಅವರು ಬಾಲ್ಯದಲ್ಲಿ ಕುದರೆ ಸವಾರಿ, ಯುದ್ಧ ತಯಾರಿ, ಕತ್ತೆ ವರಸೆ ಇನ್ನೂ ಅನೇಕ ಕಲೆಗಳಲ್ಲಿ ಪರಿಣೀತರಾಗಿದ್ದರು ಎಂದರು.
ರಾಣಿ ಚನ್ನಮ್ಮ ಅಧ್ಯಯನ ಫಿಠದ ನಿರ್ದೇಶಕರಾದ ಡಾ. ನಾಗರತ್ನ ಪರಾಂಡೆ ಮಾತನಾಡಿ ಚನ್ನಮ್ಮ ತಾಯಿ ಇತಿಹಾಸ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಭಾರತ ದೇಶದ ಹೆಮ್ಮೆಯ ಪ್ರಥಮ ಮಹಿಳಾ ಸ್ವತಂತ್ರ್ಯ ಹೋರಾಟಗಾರ್ತಿ ಆಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಕುರಿತು ಬೆಳಗಾವಿಯ ಸಾಹಿತಿಗಳಾದ ಡಾ. ನಿರ್ಮಲಾ ಬಟ್ಟಲ ಮಹಿಳಾ ವಿಚಾರ ಗೋಷ್ಠಿ ಮಾಡಿದರು. ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ರಾಣಿ ಚನ್ನಮ್ಮನ ಆದರ್ಶಗಳು ಕುರಿತು ಸಾಹಿತಿಗಳಾದ ಡಾ ಅರ್ಚನಾ ಅಥಣಿ ಮಾತನಾಡಿದರು. ಕಿತ್ತೂರು ಸಂಸ್ಥಾನದ ದತ್ತಕ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಕುರಿತು ಧಾರವಾಡದ ನಿವೃತ್ತ ಪ್ರಾಚಾರ್ಯರಾದ ಡಾ ಸರಸ್ವತಿ ಕಳಸದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಕಿತ್ತೂರು ಸಂಸ್ಥಾನದ ರಾಣಿಯರ ಸಮನ್ವಯತೆ ಸಂದೇಶ ಕುರಿತು ಸಾಹಿತಿಗಳಾದ ಶ್ರೀಮತಿ ಜ್ಯೋತಿ ಬಾದಾಮಿ ಮಾತನಾಡಿದರು.


