ಗದಗ ಏ.15- ಯುಗಾದಿ ಹಬ್ಬ ಹಿಂದೂಗಳ ಪಾಲಿಗೆ ಅತ್ಯಂತ ಅರ್ಥ ಪೂರ್ಣ ಆಚರಣೆಯಾಗಿದೆ ಈ ಹಬ್ಬ ಹೊಸವರ್ಷವು ಹೌದು ಯುಗಾದಿ ಸಂದರ್ಭದಲ್ಲಿ ಬೇವು ಬೆಲ್ಲಾ ಸೇರಿಸಿಕೊಂಡು ತಿನ್ನುತ್ತವೆ ಅದೇ ರೀತಿ ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕಬೇಕು ಆಗಲೇ ಸಾರ್ಥಕ ಎಂದು ಮುಕ್ಕಣೇಶ್ವರ ಮಠದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಎಸ್.ಎಮ್.ಕೃಷ್ಣಾ ನಗರದಲ್ಲಿರುವ ಶ್ರೀ ಆದಿಶಕ್ತಿ ದೇವಸ್ಥಾನದ 8ನೇ ಜಾತ್ರಾಮಹೋತ್ಸವದಲ್ಲಿ ಜರುಗಿದ ಧರ್ಮ ಸಭೆಯ ಸಾನಿದ್ಯ ವಹಿಸಿ ಮಾತನಾಡಿದರು.
ಎಸ್ ಎಮ್ ಕೃಷ್ಣಾ ನಗರದಲ್ಲಿ ಬಡ ಜನರೇ ವಾಸಿಸುತ್ತಿದ್ದಾರೆ ಇಂತಹ ಪ್ರದೇಶದಲ್ಲಿ ಆದಿಶಕ್ತಿ ದೇವಿಯ ದೊಡ್ಡ ದೇವಸ್ಥಾನ ನಿರ್ಮಾಣ ಮಾಡಿ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಿಮ್ಮಲ್ಲರ ಹೃದಯ ವೈಶಾಲ್ಯತೆಗೆ ಸಾಕ್ಷಿ. ಈ ಹೊಸ ವರ್ಷ ಯುಗಾದಿ ನಿಮ್ಮಲ್ಲರ ಬದುಕುಲ್ಲಿ ಒಳಿತನ್ನುಂಟು ಮಾಡಲಿ ಎಂದು ಭಕ್ತರನ್ನು ಆಶೀರ್ವದಿಸಿದರು.
ಶ್ರೀ ಫಕ್ಕೀರೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ಓಂಕಾರೇಶ್ವರ ಹಿರೇಮಠ ಓಂಕಾರಗಿರಿ ಹಾಗೂ ಶ್ರೀ ಆದಿಶಕ್ತಿ ದೇವಸ್ಥಾನದ ಶ್ರೀ ರುದ್ರಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಭಕ್ತರಿಗೆ ಆಶೀರ್ವ ವಚನ ನೀಡಿದರು.