ಸಂವಿಧಾನ ಪಾಲನೆಯೇ ನಿಜವಾದ ಗೌರವ : ಮಲ್ಲಿಕಾರ್ಜುನ ಚರಂತಿಮಠ

Ravi Talawar
ಸಂವಿಧಾನ ಪಾಲನೆಯೇ ನಿಜವಾದ ಗೌರವ : ಮಲ್ಲಿಕಾರ್ಜುನ ಚರಂತಿಮಠ
WhatsApp Group Join Now
Telegram Group Join Now

ಬಾಗಲಕೋಟೆ,ಏಪ್ರಿಲ್ 15: ಸಂವಿಧಾನಶಿಲ್ಪಿ ಡಾ|ಅಂಬೇಡ್ಕರ ಅವರು ನೀಡಿದ ಸಂವಿಧಾನ, ಅವರ ಆಶಯಗಳನ್ನು ನಿತ್ಯವೂ ನಾವು ಪಾಲನೆ ಮಾಡುವುದೇ ನಿಜವಾಗಿ ನೀಡುವ ಗೌರವ ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ನಗರದಲ್ಲಿ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್‌ದಿಂದ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಅಂಬೇಡ್ಕರ ಜಯಂತಿ ಆಚರಿಸಿ ಅವರು ಮಾತನಾಡಿದರು.

ಬಾಬಾಸಾಹೇಬರು ಸಂವಿಧಾನವನ್ನು ಈ ದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನಕ್ಕೆ ಗೌರವ ನೀಡುವ ಜತೆಗೆ, ಸಮುದಾಯದಲ್ಲಿ ಸೌಲಭ್ಯ ವಂಚಿತರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ನಾವೆಲ್ಲ ಮಾಡಬೇಕು ಎಂದರು.

ಯುವ ಮುಖಂಡ ವಿಜಯ ಸುಲಾಖೆ ಮಾತನಾಡಿ, ಬಾಬಾಸಾಹೇಬರ ಬಾಲ್ಯ ಹಾಗೂ ಸಾಮಾಜಿಕ ಜೀವನದ ಬಗ್ಗೆ ಸ್ಮರಿಸಿದರು. ಇದಕ್ಕೂ ಮುಂಚೆ  ಜಿಲ್ಲಾ ಆಡಳಿತ ಭವನದ ಆವರಣದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರ ಧ್ಯೇಯ ಮತ್ತು ದೂರದೃಷ್ಟಿಯನ್ನು ಸ್ಮರಿಸಲಾಯಿತು. ನಗರಸಭೆಯ ಪೌರ ಕಾರ್ಮಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಮುಖಂಡರಾದ ಗುರು ಅನಗವಾಡಿ, ಬಸವರಾಜ ಪಾತ್ರೋಟಿ, ಶಂಕರ ಮಗಜಿ, ಮಲ್ಲು ಮಳಿಯನ್ನವರ, ರಾಜು ಬಾಸೂತಕರ, ವಿಷ್ಣು ಮಗಜಿ, ಪಾಂಡು ಜಾಧವ್, ಮಹೇಶ ಸರೋದೆ, ಬೊಮ್ಮಣ ಮಮದಾಪೂರ, ಸುನೀಲ ಲಮಾಣಿ, ವಿನಾಯಕ ಹಾಸಲಕರ, ಮಲ್ಲು ರಾಂಪೂರ, ಹರೀಶ ರಂಗರೇಜ, ಮಲ್ಲು ಸಜ್ಜನ ಹಾಗೂ ಯಮನುರಿ ಕಮಿತಕರ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article