ಅಂಕಲಗಿ. ಮಾ. 04ಗುರುವಿನ ಮಹತ್ವ ಹೇಳುವ ಈ ರೀತಿಯ ಶ್ಲೋಕಗಳನ್ನು ಹಾಗೂ ವಚನಗಳನ್ನು ನಾವೆಲ್ಲರೂ ಕೇಳಿದ್ದೇವೆ ಅದಕ್ಕೆ ಸಾಕ್ಷಿ ಎಂಬಂತೆ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಶ್ರೀ ಅಡವಿ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಅಂದರೆ 1996-97 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ವಿದ್ಯಾರ್ಥಿ ವಿದ್ಯಾರ್ಥಿನಿಯರು 28 ವರ್ಷಗಳ ನಂತರ ಸೇರಿ ಬಂದು ತಮಗೆ ಉತ್ತಮ ಶಿಕ್ಷಣ ಕೊಟ್ಟು, ಸರಿ ದಾರಿ ತೋರಿಸಿ ಭವಿಷ್ಯ ರೂಪಿಸುವಲ್ಲಿ ಕಾರಣೀ ಭೂತರಾದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿದರು.
ಪ್ರಾರಂಭದಲ್ಲಿ ಗುರುಗಳು ವೇದಿಕೆಗೆ ಬರುವಾಗ ಅವರ ಮುಂದೆ ಹೂವಿನ ಹಾಸಿಗೆ ಹಾಕುವುದರ ಮೂಲಕ ಹೂಗಳನ್ನು ಎರಚುವುದರ ಮೂಲಕ ಅವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಅದೊಂದು ಹಬ್ಬದ ವಾತಾವರಣವಾಗಿತ್ತು.
ಗುರು ಶಿಷ್ಯರ ಈ ಸಮಾಗಮ ನೋಡುಗರ ಕಣ್ಮನ ಸೆಳೆಯುವಂತಿತ್ತು.
ತಮ್ಮ ನೆಚ್ಚಿನ ಶಿಕ್ಷಕರ ಕೈಯಲ್ಲಿ ಶಿಷ್ಯರು ಚಾಟಿಯನ್ನು ಕೊಟ್ಟು ಹೊಡೆಸಿಕೊಳ್ಳುವ ರೀತಿ ಮಾತ್ರ ವಿದ್ಯಾರ್ಥಿಗಳಿಗೆ ಬಲು ಆನಂದದಾಯಕವಾಗಿತ್ತು.
ತದನಂತರ ವೇದಿಕೆಯಲ್ಲಿ ಆಸೀನರಾಗಿರುವ ಪ್ರತಿಯೊಬ್ಬ ಗುರುವಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದ ಇನ್ನೊಂದು ವಿಶೇಷವೇನೆಂದರೆ ತಮ್ಮ ಸಹಪಾಠಿಗಳಲ್ಲಿ ಅನೇಕರು ಭಾರತೀಯ ಸೇನೆಯಲ್ಲಿ ಸೇರಿ ಕಾರ್ಯನಿರ್ವಹಿಸಿ ದೇಶ ಸೇವೆ ಮಾಡಿದ ಭಾರತ ಮಾತೆಯ ಮಕ್ಕಳಿಗೆ, ನಿವೃತ್ತರಾದವರಿಗೆ ಮತ್ತು ಇನ್ನೂ ಸೇವೆಯಲ್ಲಿರುವವರಿಗೆ ತಮ್ಮ ಗುರುಗಳಿಂದಲೇ ಸನ್ಮಾನ ಮಾಡಿಸಲಾಯಿತು.
ಉತ್ತಮ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ, ಸಂತೋಷ ಎದ್ದು ಕಾಣ್ತಾ ಇದ್ರೆ ಇನ್ನೊಂದು ಕಡೆ ಗುರುಗಳ ಮುಖದಲ್ಲಿ ಮಂದಹಾಸದ ಜೊತೆಗೆ ಅವರ ಕಂಣ್ಣಂಚಿನಲ್ಲಿ ಆನಂದ ಭಾಷ್ಪ ತುಂಬಿಕೊಂಡು ಸಂತೃಪ್ತಿ ಭಾವ ತುಂಬಿತ್ತು.
ಇದನ್ನು ನೋಡಿದ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಗುರು ಶಿಷ್ಯರ ಸಂಬಂಧ ಹೇಗಿರಬೇಕು ಅಂತಾ ಮಾದರಿ ತೋರಿಸುವಂತಿತ್ತು ಎಂದರೆ ತಪ್ಪಾಗಲಾರದು.
ನಮ್ಮೆಲ್ಲರ ಜೀವನದಲ್ಲಿ ಗುರುವಿನ ಪಾತ್ರ ಮಹತ್ವವಾದುದು ಅವರು ನಮ್ಮ ಜೀವನದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ನಾವು ಎಷ್ಟೇ ಕೃತಜ್ಞತೆ ಹೇಳಿದರು ಸಾಲದು ಬಿಡಿ ಆದರೆ ಈ ವಿದ್ಯಾರ್ಥಿಗಳಿಂದ ಕೃತಜ್ಞತೆ ಹೇಳಲು ಇದೊಂದು ಸಣ್ಣ ಪ್ರಯತ್ನ.
ಮಧ್ಯಾಹ್ನದ ರುಚಿಯಾದ ಸವಿಯಾದ ಊಟದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಮ್ಮ ಗುರುಗಳು ಸುಖಮಯವಾದ & ಆರೋಗ್ಯಯುತವಾದ ಜೀವನ ನಡೆಸಲಿ, ಇನ್ನಷ್ಟು ಕಾಲ ಉತ್ತಮವಾಗಿ ಜೀವಿಸಲಿ ಎಂದು ವಿದ್ಯಾರ್ಥಿಗಳು ಹಾರೈಸಿದರು ಹಾಗೇನೆ…
ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಉತ್ತುಂಗಕ್ಕೆ ಎರಲಿ ಇನ್ನೂ ಸಮಾಜದಲ್ಲಿ ಬೆಳೆದು ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಎಲ್ಲ ಗುರುಗಳು ಹಾರೈಸುತ್ತಾ ಶಿಷ್ಯರನ್ನು ಆಶೀರ್ವದಿಸಿದರು.