ಬೆಂಗಳೂರು: ‘ಕರಿಯ’ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್(38) ಇಂದು ಬೆಳಿಗ್ಗೆ 10 ಗಂಟೆಗೆ ನಿಧನ ಹೊಂದಿದರು. ಮೃತರು ತಾಯಿ ಹಾಗು ತಂಗಿಯನ್ನು ಅಗಲಿದ್ದಾರೆ. ಇವರ ತಂದೆ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು.
ಸಂತೋಷ್ ಕಳೆದ ಜಾಂಡೀಸ್‌ನಿಂದ ಬಳಲುತ್ತಿದ್ದರು. ಇತ್ತೀಚಿಗೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
‘ಗಣಪ’, ‘ಕರಿಯ-2’, ‘ಕೆಂಪ’, ‘ಬರ್ಕ್ಲೀ’ ಚಿತ್ರಗಳಲ್ಲಿ ನಟಿಸಿದ್ದರು. ಮುಂದಿನ ಚಿತ್ರ ‘ಸತ್ಯ’ ಬಿಡುಗಡೆ ಆಗಬೇಕಿತ್ತು. ಸದ್ಯದಲ್ಲೇ ಮದುವೆಯಾಗುವ ಸಿದ್ಧತೆ ನಡೆಸುತ್ತಿದ್ದರು.
ಆನೇಕಲ್ ಬಾಲರಾಜ್ ನಿರ್ಮಾಣದ ದರ್ಶನ್ ನಟನೆಯ ‘ಕರಿಯ’ 2003ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಈ ಸಿನಿಮಾ ರೀರಿಲೀಸ್ ಆಗಿತ್ತು.