ಬೈಲಹೊಂಗಲ03: ದೇಶದ ಅಭಿವೃದ್ದಿ ಮತ್ತು ರಕ್ಷಣೆಗಾಗಿ ಮೋದಿಯವರನ್ನ ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿ ಆಯ್ಕೆಮಾಡಲು ವಿಶ್ರಮಿಸದೆ ಮತದಾನದವರೆಗೆ ಶ್ರಮಿಸಬೇಕೆಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಸಮೀಪದ ಕ್ರಾಂತಿಯ ನಾಡು ಹೊಸೂರ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತುಷ್ಟಿಕರಣದಲ್ಲಿ ಮುಳಗಿಹೊಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಾ. ಕೊಲೆ ಮಾಡಿದವರು, ಅಲ್ಪಸಂಖ್ಯಾತ ಗೂಂಡಾಗಳ ರಕ್ಷಣೆಯಲ್ಲಿ ತೊಡಗಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ದಿನದ ಹದಿನೆಂಟು ಘಂಟೆಗಳ ಕಾಲ ದೇಶಕ್ಕಾಗಿ ಸೇವೆ ಮಾಡುತ್ತಿರುವ ಪುಣ್ಯಾತ್ಮ ಮೋದಿಯವರ ದೂರದೃಷ್ಟಿಯಿಂದ ಕೊವಿಡ್ ಸಮಯದಲ್ಲಿ ದೇಶದ ಜನತೆಗೆ ಉಚಿತ ಲಸಿಕೆ ಸಿಕ್ಕಿದೆ. ದೇಶದ ಆರ್ಥಿಕ ಪರಿಸ್ಥಿತಿ ಜಗತ್ತಿನಲ್ಲಿಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಪಾಕಿಸ್ತಾನದಂತಹ ವಿರೋಧ ರಾಷ್ಟ್ರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ, ಉಗ್ರರ ಅಟ್ಟಹಾಸವನ್ನು ಅಡಗಿಸಿದ್ದಾರೆ. ಭಾರತ ಮಾತೆಯ ಸಿಂಧೂರವಾಗಿರುವ ಜಮ್ಮುಕಾಶ್ಮೀರದಲ್ಲಿರುವ ಆರ್ಟಿಕಲ್ 370 ರದ್ದುಮಾಡಿ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.
ನಮಗೆ ಶಕ್ತಿ ಬಂದಾಗ ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೆವೆ ಎಂದು ಹೇಳುವ ಮತಾಂದರನ್ನ ಬಗ್ಗು ಬಡೆಯಲು ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕಾಗಿದೆ.
ಹಳ್ಳಿ ಹಳ್ಳಿಗೆ ಕುಡಿಯುವ ನೀರು ಮನೆಬಾಗಿಲಿಗೆ ತಲುಪಿಸಿದ್ದಾರೆ. ಮನೆ ಮನೆಗೆ ಗ್ಯಾಸ್ ವಿತರಣೆ, ಶೌಚಾಲಯ ನಿರ್ಮಾಣಮಾಡಿ ದೇಶದ ಜನತೆಗೆ ಆಸರೆಯಾದರೆ ಕಾಂಗ್ರೆಸ್ ಗ್ಯಾರೆಂಟಿ ಹೆಸರಿನಲ್ಲಿ ಜನತೆಯ ಸಾಮನ್ಯ ಸೇವೆಗಳಾದ ಜನನ, ಮರಣ ಹಾಗೂ ಜಮೀನು ಉತಾರಗಳ ಬೆಲೆ ಏರಿಸಿದೆ 20ರೂ ಬಾಂಡ್ ಬಂದ ಮಾಡಿ ನೂರು, ಇನ್ನುರು, ಯದನೂರುಪಾಯಿಗೆ ಏರಿಸಿದೆ, ಮುದ್ರಾಂಕ ಶುಲ್ಕವನ್ನು ಡಬಲ್ ಮಾಡಿ ಕಾಂಗ್ರೆಸ್ ಜನತೆಯ ಪಿಕ್ ಪಾಕೆಟ್ ಮಾಡುವ ಕಲೆ ಕರಗತ ಮಾಡಿಕೊಂಡಿದೆ ಲಕ್ಷ್ಮಕ್ಕ ಎಂದು ಸಚಿವೆಯನ್ನು ಕಿಚಾಯಿಸಿದರು. ಬೊರವೆಲ್ ಕೊರಿಸಿದ ರೈತರಿಗೆ20ಸಾವಿರ ರೂಪಾಯಿಗಳಲ್ಲಿ ಟಿಸಿ, ಕಂಬ, ತಂತಿ ನೀಡಿದರೆ ಕಾಂಗ್ರೆಸ್ ಈ ಯೊಜನೆಯನ್ನ ಐದು ಲಕ್ಷಕ್ಕೆ ಹೆಚ್ಚಿಸಿ ಹಗಲು ದರೊಡೆ ನಡೆಸಿ, ನೀರು ಇಲ್ಲಾ ಬ್ಲೆಡು ಇಲ್ಲದೆ ತೆಲೆ ಬೋಳಿಸೊ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಆದರೆ ಮೊದಿಯವರು ವಿಶ್ವ ನಾಯಕರಾಗಿ ಬೆಳೆದಿದ್ದು ಪ್ರಪಂಚದಲ್ಲಿ ಅವರ ಅಡಳಿತವನ್ನು ಮೆಚ್ಚಿದ್ದಾರೆ ಮತ್ತೊಮ್ಮೆ ಮೋದಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಗದೀಶ್ ಮೆಟಗುಡ್, ಡಾ.ವಿ.ಆಯ್.ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ . ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ ಮಾತನಾಡಿದರು.
ಹೊಸೂರ ಗ್ರಾಮದ ಕ್ರಾಂತಿಯ ಇತಿಹಾಸ ಕೇಳಿದ ಸಿ.ಟಿ.ರವಿ ಹೊಸೂರ ಪುಣ್ಯ ಭುಮಿಗೆ ಹಣೆಮನೆದು ನಮಸ್ಕಾರ ಸಲ್ಲಿಸಿದರು. ಗ್ರಾಮದವತಿಯಿಂದ ಮಾಜಿ ಸಚಿವರಾದ ಮುರಗೇಶ ನಿರಾಣಿ ಹಾಗೂ ಸಿ.ಟಿ.ರವಿ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಗುರು ಮೆಟಗುಡ್, ವಿಜಯ ಮೆಟಗುಡ್, ಮಡಿವಾಳಪ್ಪ ಚಳಕೊಪ್ಪ, ಗೌಡಪ್ಪ ಹೊಸಮನಿ, ಸುನೀಲ ಮೆಟಿ, ದೀಲಿಪ್ ವರ್ಣೇಕರ್, ಸುಭಾಷ ಬಾಗೆವಾಡಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಮುಶೆಪ್ಪ ಜಡಿ, ಮಲ್ಲಿಕಾರ್ಜುನ ವಕ್ಕುಂದ, ಜಯಶ್ರೀ ಇಂಗಳಗಿ, ಮಡಿವಾಳಪ್ಪ ಕಮತಗಿ, ಮಲ್ಲವ್ವ ಬಾರಿಗಿಡದ, ಸಂಜು ಪಾಟೀಲ, ಮಲ್ಲವ್ವ ಸುತಗಟ್ಟಿ, ದೀಪಾ ಪಾಟಿಲ ಹಾಗೂ ಬಿಜೆಪಿ ಮುಖಂಡರಾದ ಶ್ರೀಶೈಲ ಯಡಹಳ್ಳಿ, ಅಶೋಕ ಇಂಗಳಗಿ, ರಮೇಶ ವಕ್ಕುಂದ, ಅಜ್ಜಪ್ಪ ಸಂಗೊಳ್ಳಿ, ಕುಮಾರ ಸೊಗಲ, ಯಲ್ಲಪ್ಪ ಮುಗಬಸವ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಇದ್ದರು.
“ಲಕ್ಷ್ಮೀ ಅಕ್ಕಾ ನಮ್ಮ ಸರ್ಕಾರ ಬಂದು ಮೂರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಸತೇನಿ ಎಂದಕ್ಕ ಅಧಿಕಾರಕ್ಕೆ ಬಂದು ವರ್ಷಕ್ಕೆ ಸಮೀಪಿಸಿದರು ಚಕಾರ ಎತ್ತದವರು ಆ ಸಮಾಜದ ಹೆಸರಿನಮೇಲೆ ಮತ ಕೇಳುವ ನೈತಿಕತೆ ಏನಿದೆ? ಸಚಿವ ಸ್ಥಾನಕ್ಕೆ ಮೊದಲು ರಾಜಿನಾಮೆ ನಿಡಲಿ. ಇಲ್ಲಿದಿದ್ದರೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಿಸಲಿ ಹಿಂದೆ ಮಾತು ಕೊಟ್ಟಂತೆ ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳಕರಿಗೆ ಒಂದು ಕೆಜಿ ಬಂಗಾರ ಕೊಡತೇನಿ.”- ಮುರಗೇಶ ನಿರಾಣಿ, ಮಾಜಿ ಸಚಿವರು.