ಅಂಜಲಿ ಕೊಲೆ ಪ್ರಕರಣಕ್ಕೆ ಎಸಿಪಿ ಅಮಾನತು: ಇನ್ನೂ ಮೂರ್ನಾಲ್ಕು ಪೊಲೀಸರ ಲಿಸ್ಟ್ ರೆಡಿ!

Ravi Talawar
ಅಂಜಲಿ ಕೊಲೆ ಪ್ರಕರಣಕ್ಕೆ ಎಸಿಪಿ ಅಮಾನತು: ಇನ್ನೂ ಮೂರ್ನಾಲ್ಕು ಪೊಲೀಸರ ಲಿಸ್ಟ್ ರೆಡಿ!
WhatsApp Group Join Now
Telegram Group Join Now

ಹುಬ್ಬಳ್ಳಿ,21: ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ಇಟ್ಟುಕೊಂಡು ಇಲ್ಲಿಯವರೆಗೆ ನಾಲ್ಕು ಜನರನ್ನು ಅಮಾನತು ಮಾಡಿದ್ದು, ಮತ್ಯಾರು ಸಸ್ಪೆಂಡ್ ಆಗ್ತಾರೆ ಎಂದು ಪೊಲೀಸ್​ ಅಧಿಕಾರಿಗಳು ನಿದ್ದೆಗೆಟ್ಟು ಕಾಯುವಂತಾಗಿದೆ. ಅಂಜಲಿ ಕೊಲೆ ಆದ ನಂತರ ಬೆಂಡಿಗೇರಿ ಪೊಲೀಸ್​ ಠಾಣೆಯ ಇನಸ್ಪೆಕ್ಟ‌ರ್ ಸಿ.ಬಿ. ಚಿಕ್ಕೋಡಿ, ಮಹಿಳಾ ಹೆಡ್ ಕಾನ್ಸ್‌ಟೇಬಲ್ ರೇಖಾ ಅವರನ್ನು ಕಮೀಷನರ್ ರೇಣುಕಾ ಸುಕುಮಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದರು.

ಮೊನ್ನೆ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ. ರಾಜೀವ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಮಾಡಿತ್ತು. ಈಗ ದಕ್ಷಿಣ ಉಪವಿಭಾಗ ಎಸಿಪಿ ವಿಜಯಕುಮಾರ ತಳವಾರ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ಮೂರ್ನಾಲ್ಕು ಪೊಲೀಸರನ್ನು ಸಸ್ಪೆಂಡ್ ಮಾಡಲು ಕಮೀಷನ‌ರ್ ರೇಣುಕಾ ಮೇಡಂ ಲಿಸ್ಟ್ ರೆಡಿ ಮಾಡಿದ್ದಾರಂತೆ. ಇಂತಹ ಒಂದು ಪ್ರಕರಣದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಧಿಕಾರಿಗಳನ್ನ ಹಾಗೂ ಸಿಬ್ಬಂದಿಯರನ್ನು ಅಮಾನತು ಮಾಡಿರುವುದು ರಾಜ್ಯದಲ್ಲಿಯೇ ಮೊದಲ ಪ್ರಕರಣ ಎನ್ನಲಾಗಿದೆ.

 

WhatsApp Group Join Now
Telegram Group Join Now
Share This Article