ಸಾಧನೆ ಮಾಡಿದ ಬಾಲ್ಯ ಸ್ನೇಹಿತರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ

Ravi Talawar
ಸಾಧನೆ ಮಾಡಿದ ಬಾಲ್ಯ ಸ್ನೇಹಿತರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ
WhatsApp Group Join Now
Telegram Group Join Now
ಬೈಲಹೊಂಗಲ- ಪ್ರತಿವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡಮಾಡುವ ರಾಷ್ಟೀಯ ಐಕಾನ್ ಪ್ರಶಸ್ತಿಗೆ ಬಾಲ್ಯ ಸ್ನೇಹಿತರಾದ ವೇ.ಮೂ. ಸದಾಶಿವಯ್ಯ ಪತ್ರಿಮಠ,ಈಶ್ವರ ಶಿಲ್ಲೇದಾರ ಭಾಜನರಾಗಿದ್ದಾರೆ.   ರವಿವಾರ ಧಾರವಾಡ ರಂಗಾಯಣದಲ್ಲಿ ನಡೆದ2025 ನೇ ಸಾಲಿನ  ರಾಷ್ಟೀಯ ಐಕಾನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೈಲಹೊಂಗಲ  ನಗರದ
ಖ್ಯಾತ ಜ್ಯೋತಿಷಿಗಳಾದ ವೇ.ಮೂ. ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು ವೈದಿಕ ಕ್ಷೇತ್ರದಲ್ಲಿ ಮಾಡಿದ ಅನನ್ಯ ಸೇವೆಯನ್ನು ಗುರುತಿಸಿ “ವಿಶ್ವ ಜ್ಯೋತಿಷಿ ರಾಜಋಷಿ” ಪ್ರಶಸ್ತಿ ನೀಡಲಾಗಿದ್ದು,ಅದೇ ರೀತಿ ಉದಯಕಾಲ ಪತ್ರಿಕೆ ವರದಿಗಾರರಾದ ಈಶ್ವರ ಶಿಲ್ಲೇದಾರ ಅವರ ಹಲವು  ವರ್ಷಗಳ ಮಾಧ್ಯಮ ಸೇವೆಯನ್ನು ಗುರುತಿಸಿ “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಹಿನ್ನೆಲೆ ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಪರಿಷತ್, ಮುಜರಾಯಿ ಇಲಾಖೆ ಸದಸ್ಯರಾದ ವೇ. ಮೂ. ಮಹಾಂತಯ್ಯ ಆರಾದ್ರಿಮಠ ಶಾಸ್ತ್ರೀಗಳು,ವೇ.ಮೂ. ಮಹಾಂತಯ್ಯ ಪತ್ರಿಮಠ (ತೆಗ್ಗಿನಮಠ)ಶಾಸ್ತ್ರಿಗಳು,ಭಗಳಾoಬಾ ದೇವಸ್ಥಾನದ ಧರ್ಮದರ್ಶಿ ವೇ. ಮೂ.ಈರಯ್ಯ ಹಿರೇಮಠ ಶಾಸ್ತ್ರಿಗಳು,ಶಾಸಕ ಮಹಾಂತೇಶ ಕೌಜಲಗಿ,ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ,ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ,ಚಲನಚಿತ್ರ ನಟ ಶಿವರಂಜನ ಬೋಳನ್ನವರ,ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ,ಪತ್ರಕರ್ತರಾದ ಈಶ್ವರ ಹೋಟಿ,ಸಿ.ವೈ. ಮೆಣಸಿನಕಾಯಿ,ಕುಮಾರ ರೇಶ್ಮಿ,ಬಸವರಾಜ ಕಲಾದಗಿ,ವಿರೂಪಾಕ್ಷ ವಾಲಿ,ಉದಯ ಕೋಳೆಕರ, ಮಹಾಂತೇಶ ರಾಜಗೋಳಿ, ರವಿಕುಮಾರ ಹುಲಕುಂದ, ಷರೀಫ್ ನದಾಫ್, ಮಂಜುನಾಥ ಜೋತಿ,ಪ್ರಕಾಶ ಬೆಳಗಾವಿ,ಯುನುಸ್ ಬಡೆಘರ್,ಈರಣಗೌಡ ಶೀಲವoತರ,ಜಂಗಮ ಸಮಾಜದ ಅಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ,ಮುಸ್ಲಿo ಸಮಾಜದ ಮುಖಂಡ ಬಾಬು ಸಂಗೊಳ್ಳಿ,ಪ್ರದೇಶ ಕುರುಬರ ಸಂಘದ ಅಧ್ಯಕ್ಷ ವಿಜಯಕುಮಾರ ದಳವಾಯಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ,ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ,ಕೆ,ಆರ್,ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಜಿ.ಕುಂಬಾರ, ಜಿಲ್ಲಾ ಗೌರವಾಧ್ಯಕ್ಷ ಸಿದ್ದು ಕಣಬರಗಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಡಿವಾಳಪ್ಪ ಹಿರೇಹೊಳಿ,ಮುಖಂಡರಾದ ಗುರು ಮೆಟಗುಡ್ಡ,ಡಾ.ಸುಭಾಷ್ ತುರಮರಿ,ಶ್ರೀಶೈಲ ಯಡಳ್ಳಿ,ಎಫ್. ಎಸ್. ಸಿದ್ದನಗೌಡರ,ಮುರಗೆಪ್ಪ ಗುಂಡ್ಲೂರ,ಪಾಂಡಪ್ಪ ಇಂಚಲ, ಕುಮಾರಗೌಡ ಪಾಟೀಲ, ಶ್ರೀಕಾಂತ ಮತ್ತಕೊಪ್ಪ ಸೇರಿದಂತೆ ನಗರದ ಗಣ್ಯಮಾನ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article