ಬಾಗಲಕೋಟೆ,23: ಪ್ರತಿಷ್ಠಿತ ಬಿ.ವ್ಹಿ.ವ್ಹಿ.ಸಂಘದ ಪ.ಪೂ ಕಾಲೇಜುಗಳ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರಿಕ್ಷೇಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು ಮಂಗಳವಾರ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರು ಸನ್ಮಾನಿಸಿ ಗೌರವಿಸಿದರು.
ಶೈಕ್ಷಣಿಕ ವರ್ಷ ೨೦೨೩-೨೪ ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ
ಬಾಗಲಕೋಟೆಯಲ್ಲಿನ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಮೋನಿಕಾ ಪೂಜಾರಿ, ೫೮೯/೬೦೦. ಗಂಗವ್ವ ಎಚ್.ಮಡ್ಡಿ ೫೭೩/೬೦೦. ರಾಮದುರ್ಗದಲ್ಲಿನ ಸ್ಟೇಟ್ ಪದವಿಪೂರ್ವ ಕಾಲೇಜಿನ ನೇತ್ರಾವತಿ ೫೭೦/೬೦೦. ಮುದೋಳದ ಬಿವಿವಿಎಸ್
ಮಹಿಳಾಪಪೂ ಕಾಲೇಜಿನ ಆರ್.ಎಸ್.ಕಲ್ಮಡಿ, ಇನ್ನು ವಾಣಿಜ್ಯ ವಿಭಾಗದಲ್ಲಿ ರಾಮದುರ್ಗದ ಸ್ಟೇಟ್ ಪದವಿಪೂರ್ವ ಕಾಲೇಜಿ ರೇಖಾ ಪಾಟೀಲ ೬೭೯/೬೦೦.ಹಾಗೂ ಪಲ್ಲವಿ ಕಮ್ಮಾರ ೫೭೮/೬೦೦. ಲೋಕಾಪುರದ ಬಿವಿವಿಎಸ್ ಮಹಿಳಾ ಪಪೂ ಕಾಲೇಜಿನ ವಿದ್ಯಾ ಬಿರಾದಾರ ಪಾಟೀಲ ೫೭೪/೬೦೦.ಹಾಗೂ ಪವಿತ್ರಾ ಪಾಟೀಲ ೫೭೪/೬೦೦. ಸಾಲಹಳ್ಳಿಯ ರಾಮಕೃಷ್ಣ ಪರಮಹಂಸ ಪಪೂ ಕಾಲೇಜಿನ ಶಂಕರಗೌಡ ಪಾಟೀಲ ೫೭೪/೬೦೦. ಮತ್ತು ವಿಜ್ಞಾನ ವಿಭಾಗದಲ್ಲಿ ರಾಮದುರ್ಗದ ಸ್ಟೇಟ ಪದವಿಪೂರ್ವ ಕಾಲೇಜಿನ ಜ್ಯೋತಿ ಕಡಿವಾಲ ೫೬೫/೬೦೦. ಮುಧೋಳ ಆರ್.ಎಂ.ಜಿ. ಪದವಿಪೂರ್ವ ಕಾಲೇಜಿನ ಅಕ್ಷತಾ ಮಟಗಾರ ೫೬೨/೬೦೦. ಹಾಗೂ ಸುಮಿತ್ರಾ ವೈಮಾದರ ೫೪೭/೬೦೦ ಈ ಎಲ್ಲ ವಿದ್ಯಾರ್ಥಿಗಳಿಗೆ ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಸನ್ಮಾನಿಸಿ ಮಾತನಾಡಿದರು.
ವಿದ್ಯಾಗಿರಿಯ ಬಿವಿವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಅನಿಷಾ ನದಾಪ, ಕಲಾ ವಿಭಾಗದಲ್ಲಿ ೫೯೦ ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ೭ ನೇಯ ರ್ಯಾಂಕ್ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನವನ್ನು
ಪಡೆದುಕೊಂಡಿದ್ದಾಳೆ. ಹಾಗೂ ಕುಮಾರ ಪ್ರವೀಣ್ ಕೊಲ್ಕಾರ ವಿಜ್ಞಾನ ವಿಭಾಗದಲ್ಲಿ೫೯೦ ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ೯ನೇಯ ರ್ಯಾಂಕ್ ಹಾಗೂ ಜಿಲ್ಲೆಗೆ ಎರಡನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಒಟ್ಟಾರೆ ಕಾಲೇಜಿನ ಫಲಿತಾಂಶ ಹೆಮ್ಮೆ ಪಡುವಂತಾಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸಮಾಜಕ್ಕೆ ಮಾದರಿಯಾಗುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶಶೆಟ್ಟರ, ವಾಹನಗಳ
ನಿರ್ವಹಣೆ ಸಂಯೋಜಕರಾದ ಅಶೋಕ ರೇಣುಕಪ್ಪ ಕರಡಿ, ಪ್ರಾಚಾರ್ಯರಾದ ಕೆ.ಎಚ್.ಹೊಸುರ, ಬಿ.ಎ.ಗಂಜಿಹಾಳ, ಶಾಂತಕುಮಾರ ವಂಟಮುರಿ, ರವಿ ಚಿತ್ರಗಾರ, ರುದ್ರಪ್ಪ ಮುದನೂರ, ಶಿವು ಹುದ್ದಾರ ಸೇರಿದಂತೆ ಉಪನ್ಯಾಸಕರು
ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.