ಕೂಡಗಿ: ಮೊನ್ನೆ ನಡೆದ ದ್ವಿತೀಯ ಪಿಯುಸಿಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದು ಗ್ರಾಮ ಪಂಚಾಯತಿ, ಎಸ್. ಡಿ. ಎಮ್. ಸಿ, ಗ್ರಾಮದ ಗುರು, ಹಿರಿಯರು ಹಾಗೂ ಕಾಲೇಜಿನ ಸಿಬ್ಬಂಧಿವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.
ರುಕ್ಮಿಣಿ ತಳೇವಾಡ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದರ ಮೂಲಕ ಶೇಕಡಾ ೯೬% ಕಾಲೇಜಿಗೆ ಪ್ರಥಮ ಸ್ಥಾನ ಸೌಮ್ಯ ಬಡಿಗೇರ ಸಮಾಜ ಶಾಸ್ತ್ರದಲ್ಲಿ ನೂರಕ್ಕೆ ೯೬ ಅಂಕಗಳ ಮೂಲಕ ಶೇಕಡಾ ೯೪% ಗಳಿಸಿ ದ್ವಿತೀಯ ಸ್ಥಾನ ಹಾಗೂ ಉಮೇಶ ನಾಯಕ
ಶೇಕಡಾ ೯೨% ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಒಟ್ಟು ೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡದೇ ಗೈರು ಹಾಜರಾಗಿದ್ದಾರೆ. ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಆಂಗ್ಲ ವಿಷಯದಲ್ಲಿ ಅನುತ್ತೀರ್ಣಗೊಂಗಡಿದ್ದು ಕಾಲೇಜಿನ ಫಲಿತಾಂಶ ಶೇಕಡಾ ೯೭&#೩೯;% ರಷ್ಟಾಗಿದ್ದು. ಪ್ರಾಚಾರ್ಯ ಕೆ. ಜಿ. ಲಮಾಣಿ ಹಾಗೂ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.