ಬೆಳಗಾವಿ: ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಿಂದ ಉದ್ಯಮಶೀಲತಾ ಅಭಿವೃದ್ಧಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ರೈತರಿಗೆ ಡ್ರೋನ್ ಮೂಲಕ ಕೃಷಿ ರಾಸಾಯನಿಕಗಳು ಹಾಗೂ ಕೀಟನಾಶಕಗಳನ್ನು ಸಿಂಪರಣೆ ಮಾಡಲು ಅನುಕೂಲವಾಗುವಂತೆ ಯುವಕರನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಕೆವಿಕೆ ಮತ್ತಿಕೊಪ್ಪ ವಿಜ್ಞಾನಿಗಳು ಇಲ್ಲಿನ ಸಮೀಪದ ಮಲ್ಲಾಪುರ ಗ್ರಾಮದ ಶ್ರೀ ನಾಗರಾಜ ತಲ್ಲೂರ ಹಾಗೂ ಸಹೋದರರಿಗೆ ಸೆಲ್ಕೋ ಕಂಪನಿಯ ಸಹಯೋಗದೊಂದಿಗೆ ಡ್ರೋನ್ ಮಷಿನ್ ಒದಗಿಸಲಾಗಿದೆ.
ಶ್ರೀ ನಾಗರಾಜ ಅವರಿಗೆ ಈಗಾಗಲೇ ಡ್ರೋನ್ ಪೈಲೆಟ್ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಿಂದ ನೀಡಲಾಗಿದ್ದು, ಈ ದಿಸೆಯಲ್ಲಿ ರೈತರ ಸೇವೆಯಲ್ಲಿ ನೀಡಲಾದ ಮೂರನೇಯ ಡ್ರೋನ್ ಇದಾಗಿದೆ. ಸಂದಿಗ್ಧ ಕೃಷಿ ಪರಿಸ್ಥಿತಿಗಳಲ್ಲಿ ಕೃಷಿ ಪರಿಕರಗಳನ್ನು ಸಿಂಪರಣೆ ಮಾಡಲು ಡ್ರೋನ್ ಸಹಕಾರಿಯಾಗಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಂಸ್ಥೆಯ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಮಂಜುನಾಥ ಚೌರಡ್ಡಿ ಕೋರಿದರು. ಮತ್ತಿಕೊಪ್ಪ, ನೇಸರಗಿ, ದೇಶನೂರ, ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಲು ವಿನಂತಿಸಲಾಯಿತು. ಹೊಸದಾಗಿ ಸ್ವೀಕರಿಸಲಾದ ಡ್ರೋನ್ ಮಷಿನ್ ಕುರಿತು ನಾಗರಾಜ ತಲ್ಲೂರ ಹಾಗೂ ಕೇಂದ್ರದ ಡ್ರೋನ್ ವಿಜ್ಞಾನಿ ಪ್ರವೀಣ ಯಡಹಳ್ಳಿ ವಿವರಿಸಿದರು. ಇದೇ ಸಂ?ರ್ಭದಲ್ಲಿ ಕೆಎಲ್ಇ ಕೃಷಿ ಮಹಾವಿದ್ಯಾಲಯದ ಡೀನ್
ಡಾ. ಪಿ. ಎಸ್. ಹೂಗಾರ ಹಾಗೂ ಕೇಂದ್ರದ ವಿಜ್ಞಾನಿಗಳಾದ ಎಸ್. ಎಮ್. ವಾರದ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ. ಐ., ಬಸವರಾಜ ಅಮ್ಮಿನಬಾವಿ, ವೀಣಾ ಬನ್ನೂರ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಕೃಷಿ ವ್ಯವಸ್ಥೆಯಲ್ಲಿ ಡ್ರೋನ್ ಸದ್ಬಳಕೆ ಕುರಿತು ರೈತ ವಲಯದಲ್ಲಿ ಅರಿವು ಮೂಡಿಸುವ ಹಾಗೂ ಯುವಕರಲ್ಲಿ ಉದ್ಯಮಶೀಲತಾ ಮನೋಭಾವ ತುಂಬುವ ಇನ್ನ? ಕಾರ್ಯಕ್ರಮಗಳನ್ನು ಕೇಂದ್ರದಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
ಉದ್ಯಮಶೀಲತಾ ಅಭಿವೃದ್ಧಿಗೆ ಕಿಸಾನ್ ಡ್ರೋನ್: ಕೆವಿಕೆ, ಮತ್ತಿಕೊಪ್ಪ ಸಾಧನೆ


