ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಬಿಸಿಎ ವಿದ್ಯಾರ್ಥಿಗಳು ಬೆಳಗಾವಿ ಆರ್ಎಲ್ಎಸ್ ಕಾಲೇಜಿನಲ್ಲಿ ನಡೆದ ೨ ದಿನಗಳ ಭವ್ಯ ಟೆಕ್ನೋವಾ ಬಿಹೈಂಡ್ ಇಮ್ಯಾಜಿನೇಷನ್ ಹ್ಯಾಕಥಾನ್ ಸ್ಪರ್ಧೆಎಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ದ್ದಾರೆ.
ಹ್ಯಾಕಥಾನ್ (ಒವರ್ಆಲ್ ಇನೋವೇಶನ್) ವಿಭಾಗದಲ್ಲಿ ಸೈಬರ್ ಸೆಕ್ಯುರಿಟಿ ವಿಭಾಗದಲ್ಲಿ ಮಲ್ಲಿಕಾರ್ಜುನ ಗಾಂಟಿ, ಚಿದಾನಂದ ಹಳ್ಳಿ ತಂಡ ತೃತೀಯ ಸ್ಥಾನ ಪಡೆದಿದೆ. ಹ್ಯಾಕಥಾನ್ (ಓವರ್ಆಲ್) ವಿಭಾಗದಲ್ಲಿ ಮಲ್ಲಿಕಾರ್ಜುನ ಬಡಿಗೇರ್, ಆಕಾಶ ಗರಗದ,ವಿಕಾಸ್ ಗಲಗಲಿ ತಂಡ ತೃತೀಯ ಸ್ಥಾನ ಪಡೆದಿದೆ.
ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ೨೪ ಗಂಟೆ ನಿರಂತರ ಪರಿಶ್ರಮಿಸಿ, ನೈಜ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿಗಳ ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ತಂಡದ ಸಹಕಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಎಂದು
ಮಹಾಲಿಂಗಪುರ ಕೆಎಲ್ಇ ಬಿಸಿಎ ಕಾಲೇಜಿನ ಸಂಯೋಜಕ ಎಸ್.ಐ.ಪಾಟೀಲ ತಿಳಿಸಿದ್ದಾರೆ.
೧೦ ಎಂಎಲ್ಪಿ ೧
ಮಹಾಲಿಂಗಪುರದ ಕೆಎಲ್ಇ ಬಿಸಿಎ ವಿದ್ಯಾರ್ಥಿಗಳು ಹ್ಯಾಕಥಾನ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.


