ಮುಗಳಖೋಡ (೨೮) ಸನ್ 2006-07ರಲ್ಲಿ ಮಾಜಿ ಶಾಸಕ ಬಿ ಸಿ ಸರಿಕರ ಅವರ ಅವಧಿಯಲ್ಲಿ ಪ್ರಾರಂಭಿಸಿದ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರಕಾರಿ ಪ್ರೌಢ ಶಾಲೆ ಮಾಜಿ ಶಾಸಕ ಎಸ್ ಬಿ ಘಾಟಗೆ ಕಟ್ಟಡ ಶಂಕುಸ್ಥಾಪನೆ ಮಾಡಿದ್ದರು.
12/08/2014 ಮಾಜಿ ಶಾಸಕ ಪಿ ರಾಜೀವ್ ಕಟ್ಟಡ ಉದ್ಘಾಟಿಸಿದ್ದರು, ನಂತರ ಪರಿಕ್ಷಾ ಕೇಂದ್ರವು ಸಹ ಪ್ರಾರಂಭಗೊಂಡಿತು. 2022ನೇ ಸಾಲಿನಲ್ಲಿ ಈ ಶಾಲೆಯ ಒಟ್ಟಾರೆ ಫಲಿತಾಂಶ 88.23 ಗರಿಷ್ಠ 98.88 ಪಡೆದುಕೊಂಡು ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. 2023 ರಲ್ಲಿ ಒಟ್ಟಾರೆ ಫಲಿತಾಂಶ 90.78 ಗರಿಷ್ಠ 98.72 ಕೇಂದ್ರಕ್ಕೆ ಪ್ರಥಮ ಹಾಗು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದು ಸರಕಾರದಿಂದ ಉಚಿತ ಲ್ಯಾಪ್ಟಾಪ್ ಪಡೆದುಕೊಂಡಿತ್ತು. ಅದೇ ರೀತಿ 2024 ರಲ್ಲಿ ಒಟ್ಟಾರೆ ಫಲಿತಾಂಶ 85.61 ಗರಿಷ್ಠ 96.80 ಗಂಕಗಳನ್ನು ಪಡೆದುಕೊಂಡು ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಸರಕಾರದಿಂದ ಉಚಿತ ಲ್ಯಾಪ್ಟಾಪ್ ಪಡೆದುಕೊಂಡಿದ್ದ ಇತಿಹಾಸವಿದೆ.
ಆದರೆ ಈ ಬಾರಿ ಹಿತಾಸಕ್ತಿಗಳ ಒತ್ತಡಕ್ಕೆ ಈ ಶಾಲೆಯ ಪರೀಕ್ಷಾ ಕೇಂದ್ರ ರದ್ದಾಗಿರುವುದ್ದರಿಂದ. ಶಾಲಾ ಅಭಿವೃದ್ಧಿಗೆ ಹಿನ್ನಡೆಗೆ ಬೇರೆ ಕಾರಣ ಬೇಕಿಲ್ಲ. ವಸ್ತುನಿಷ್ಠವಾದ ಪರೀಕ್ಷೆ ನಡೆಸಿದ್ದ ಇಲ್ಲಿ ,
ಪರೀಕ್ಷಾ ಕೇಂದ್ರ ರದ್ದಾಗಿರುವುದು ಖಂಡನೀಯ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆ ಸ್ಥಳೀಯ ಹಾಗೂ ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ.ಬರುವ ವರ್ಷ ಮತ್ತೆ ಪರಿಕ್ಷಾ ಕೇಂದ್ರ ಪ್ರಾರಂಭಿಸಬೇಕು ,ಯಾವುದೇ ಹಿತಾಸಕ್ತಿಗಳಿಗೆ ಮನೆ ಹಾಕಿದರೆ ಹೊರಾಟದಿಂದ ಪಡೆಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳ ಪಾಲಕರು ಪೋಷಕರು ಹಾಗೂ
ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.
ಈ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ 5 ಎಕರೆ ಭೂಮಿ ಇದ್ದು ಸಂಪೂರ್ಣ ಸುತ್ತು ಗೋಡೆ ಇಲ್ಲದೆ ಇರುವುದು, ಮತ್ತು 2021-22 ರಲ್ಲಿ ಪ್ರೌಢ ಶಾಲೆಗೆ ಹೆಚ್ಚಿನ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭ ವಾದರು ಪೂರ್ತಿ ಗೊಳ್ಳದೆ ಇರುವುದು, ಗುತ್ತಿಗೆದಾರ ಯಾರ ಸಂಪರ್ಕಕ್ಕೆ ಸಿಗದೇ ಇರುವುದು ಸಂಬಂಧಿಸಿದ ಇಲಾಖೆಯ ನಿರಾಸಕ್ತಿಯೇ ಕಾರಣವಾಗಿದ್ದು ಇನ್ನಾದರೂ ಪುರಸಭೆ ಅಧ್ಯಕ್ಷ, ಸದಸ್ಯರು ಸ್ಥಳೀಯ ಜನಪ್ರತಿನಿಧಿಗಳು, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶಾಸಕರು, ಸದಸ್ಯರು ಎಚ್ಚೆತ್ತು ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸಿ ಬಡವರ ದಿನದಲಿತರ ಭಾಗ್ಯದಾತರಾಗಲಿ ಎಂಬುದು ಇಂದಿನ ಶಾಲಾ ಸ್ಥಿತಿ ಕಂಡು ನೊಂದ ಸಾರ್ವಜನಿಕರ ಆಸೆಯಾಗಿದೆ.