ಕನ್ನಡ ಪ್ರೇಮಿ ಮಲ್ಲಿಕಾರ್ಜುನ ಖಂಡಮ್ಮನವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ: ನಟ  ದೊಡ್ಡಣ್ಣ

Ravi Talawar
ಕನ್ನಡ ಪ್ರೇಮಿ ಮಲ್ಲಿಕಾರ್ಜುನ ಖಂಡಮ್ಮನವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ: ನಟ  ದೊಡ್ಡಣ್ಣ
WhatsApp Group Join Now
Telegram Group Join Now

ಗದಗ06: ನಟರಂಗ ಕಲ್ಚರಲ್ ಅಕಾಡೆಮಿ ಆಂಡ್ ಟ್ರಸ್ಟ್ (ರಿ)  ಗದಗ ವತಿಯಿಂದ ಮಕ್ಕಳ ಕಲರವ-೨೦೨೪ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ  ಗಾವಿ- ಗದಗದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಜರುಗಿದ ಸಮಾರಂಭದ ಉದ್ಘಾಟನೆಯನ್ನು  ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಮಾನ್ಯ ಕುಲಪತಿಗಳು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಗದಗ,
ಗೌರವಾಧ್ಯಕ್ಷತೆಯನ್ನು ಡಾ. ರಾಜಶೇಖರ ಮ್ಯಾಗೇರಿ ಸಹಾಯಕ ಪ್ರಾಧ್ಯಾಪಕರು ಹಾಗೂ ಮಾಜಿ ವೈದ್ಯಕೀಯ ಅಧೀಕ್ಷಕರು ಕೋವಿಡ್ ವಾರಿಯರ‍್ಸ್, ಅಧ್ಯಕ್ಷತೆಯ್ನು ಶ್ರೀಯುತ ಪ್ರೊ. ಡಾ. ಸುರೇಶ ವಿ. ನಾಡಗೌಡರ ಕುಲಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ಗದಗ, ಹಿರಿಯ ಚಿತ್ರನಟ ದೊಡ್ಡಣ, ಬ್ಯಾಡಗಿಯ ಬಿಜೆಪಿ ಮುಖಂಡರಾದ ಮುರಿಗೆಪ್ಪ ಶೆಟ್ಟರ್, ಮಲ್ಲಿಕಾರ್ಜುನ ಖಂಡಮ್ಮನವರು ಇವರುಗಳಿಂದ ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಚಲನಚಿತ್ರ ನಟರಾದ ಶ್ರೀಯುತ ದೊಡ್ಡಣ್ಣರವರು ಮಾತನಾಡಿ ಗದುಗಿನ ವೀರನಾರಾಯಣ ದೇವಸ್ಥಾನದ ಬಗ್ಗೆ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳವರ ಮತ್ತು ಕೊಪ್ಪಳ ಗವಿಸಿದ್ದೇಶ್ವರ ಬಗ್ಗೆ ಮಾತನಾಡಿದರು.

ಗದುಗಿನ ರೋಟರಿ ಸೆಂಟ್ರಲ್ ಅಧ್ಯಕ್ಷರಾದ ವಿಜಯಕುಮಾರ ಹಿರೇಮಠ, ಶ್ರೀಮತಿ ಜಾನಕಿ ಚಿಕ್ಕನಗೌಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿಗಳಾದ ಮಲ್ಲಿ ಕಾರ್ಜುನ ಖಂಡಮ್ಮನವರವರನ್ನು ಸನ್ಮಾನಿಸಿ ಸನ್ಮಾನಿತರ ಬಗ್ಗೆ ಹಿರಿಯ ನಟ ದೊಡ್ಡಣ್ಣರವರು ಮಾತನಾಡಿ ಹಿರಿಯರಾದ ಮಲ್ಲಿಕಾರ್ಜುನ ಖಂಡಮ್ಮನವರ ಅವರ ಕನ್ನಡ ಪ್ರೇಮವನ್ನು ಅವರ ವೇಷಭೂಷಣ ಕಂಡು ಹರ್ಷ ವ್ಯಕ್ತಪಡಿಸುತ್ತ ಕನ್ನಡದ ಬಗ್ಗೆ ಅವರ ಪ್ರೇಮ ಮತ್ತು ಕನ್ನಡ ಭಾಷೆಯ ಬಗ್ಗೆ ಇಂದಿನ ಯುವಕರಿಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅತ್ಯಂತ
ಶ್ಲಾಘನೀಯವಾಗಿದೆ. ಈಗ ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಪ್ರದೇಶದ ಜನತೆಯಿಂದ ಹಾಗೂ ಕನ್ನಡದ ಕಲಾವಿದರಿಂದ ಭಾಷೆ ಉಳಿದಿದೆ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇಂತಹ ಶ್ರೀಮಂತ ಭಾಷೆಯನ್ನು ಮನೆಯಿಂದಲೆ ಮತ್ತು ಮಕ್ಕಳಿಗೆ ಅಮ್ಮ, ಅಪ್ಪ ಎಂಬ ಕನ್ನಡ ನುಡಿಮುತ್ತುಗಳನ್ನು ಪ್ರಾರಂಭಿಸಿ ಕನ್ನಡ ಉಳಿಸಿ ಬೆಳೆಸೋಣ ಎಂದು ಭಾವನಾತ್ಮಕವಾಗಿ ನುಡಿದರು. ಅದರಲ್ಲೂ ಕನ್ನಡ ಅಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರನ್ನು ಸನ್ಮಾನಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ.

ಅವರ ಕನ್ನಡ ಪ್ರೇಮವನ್ನು ಎಷ್ಟು ಹೊಗಳಿದರು ಸಾಲದು ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಆಯೋಜಿಸಿರುವ ನಟರಂಗ್ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ ಚಿಕ್ಕಮಠ ಇವರು ಇಂದಿನ ಮಕ್ಕಳಿಗೆ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಇಂತಹ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತರಬೇತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳುತ್ತ ಇಂತಹ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಎಲೆ ಮರೆಯಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವ ಸಲ್ಲಿಸುತ್ತಿರುವುದು ನಟರಂಗ ಸಂಸ್ಥೆಯು ಬಹುದೊಡ್ಡ ಕಾರ್ಯಕ್ರಮ ಮಾಡುತ್ತಿದೆ. ಈ ಸಂಸ್ಥೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಎಂದು ಶುಭ ಹಾರೈಸಿದರು.

 

WhatsApp Group Join Now
Telegram Group Join Now
Share This Article