30ನೆ ವಾರ್ಡ್ ನ ಆಶ್ರಯ ಕ್ವಾಟರ್ಸ್ ಗೆ ಆಕಸ್ಮಿಕ ಬೆಂಕಿ 

Ravi Talawar
30ನೆ ವಾರ್ಡ್ ನ ಆಶ್ರಯ ಕ್ವಾಟರ್ಸ್ ಗೆ ಆಕಸ್ಮಿಕ ಬೆಂಕಿ 
WhatsApp Group Join Now
Telegram Group Join Now
ಬಳ್ಳಾರಿ ಏ 03:  ಮಹಾನಗರ ಪಾಲಿಕೆ ವ್ಯಪ್ತಿಯ 30ನೆ ವಾರ್ಡ್ ನ ಆಶ್ರಯ ಕ್ವಾಟರ್ಸ್   ಆಕಸ್ಮಿಕ ಬೆಂಕಿ ಅವಘಡದಿಂದಾಗಿ ವಾಸದ ಮನೆಯೊಂದು ಸುಟ್ಟಿರುವ ಘಟನೆ ಬುದುವಾರ ರಾತ್ರಿ 10ಕ್ಕೆ ಸಂಭವಿಸಿದೆ.
ವಾಹಿದ ವಯಸ್ಸು (30 ) ಎಂಬುವರ ಮನೆಯೇ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ಮೊತ್ತದ ಸರಕುಗಳು ನಷ್ಟವಾಗಿವೆ. ಮನೆಯಲ್ಲಿ ಯಾರು ಇಲ್ಲದೆರುವಾಗ  ರಂಜಾನ್ ಹಬ್ಬದ ಪ್ರಯುಕ್ತ  ಬಂಧುಗಳ ಮನೆಗೆ ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ವಾರ್ಡ್ ನ ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬರುವಷ್ಟರಲ್ಲಿ ಮನೆಯು ಭಾಗಶಃ ಸುಟ್ಟುಹೋಗಿತು
ಸಾರ್ವಜನಿಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿಯನ್ನು ನಂದಿಸುವ ಮೂಲಕ ಅಕ್ಕಪಕ್ಕದ ಮನೆಗಳಿಗೆ ಆಗಬಹುದಾದ ಭಾರೀ ಅವಘಡ ತಪ್ಪಿಸಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ದವಸ ಧಾನ್ಯ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ ಸ್ಥಳಕ್ಕೆ ಪಾಲಿಕೆ
 ಪಾಲಿಕೆ ಸದಸ್ಯರಾದ ಎನ್.ಎಂ.ಡಿ ಆಸೀಫ್ ಬಾಷ ಅವರು ಮನೆಯನ್ನು ಪರಿಶೀಲಿಸಿ ನಂತರ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರ  ಗಮನಕ್ಕೆ ತಂದಿದರು .ತಕ್ಷಣ ಸ್ಪಂದಿಸಿದ ಮಾಜಿ ಸಚಿವ ಬಿ.ನಾಗೇಂದ್ರ ಅವರು ಕರೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಸ್ಥಳದಲ್ಲೇ ತಮ್ಮ ಸ್ವಂತ ಖರ್ಚಿನಿಂದ ಮಹಾನಗರ ಪಾಲಿಕೆ ಸದಸ್ಯ ಆಸಿಫ್ ಅವರ ನೇತೃತ್ವದಲ್ಲಿ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡಿದ್ದಾರೆ
  ಶಾಸಕರ ಆದೇಶದಂತೆ
ಸ್ಥಳಕ್ಕೆ   ತಾಲೂಕು ದಂಡಧಿಕಾರಿ ರೇಖಾ ಟಿ ಮಹಾನಗರ ಪಾಲಿಕೆ ಕಮಿಷನರ್ ಖಾಲಿಲ್ ಸಾಬ್ ಮತ್ತು ಜೇಸ್ಕಾಂ ಅಧಿಕಾರಿಗಳು ತನಿಖೆ ಮಾಡಿ  ನಿವಾಸಿಗಳಿಗೆ ಸೂಕ್ತ ಪರಿಹಾರ  ನೀಡಲಿದ್ದೇವೆ ಎಂದು ಭರವಸೆ ನೀಡಿದರು
WhatsApp Group Join Now
Telegram Group Join Now
Share This Article