ಆಕಸ್ಮಿಕ ದಾಳಿ; ಬಾಲ ಕಾರ್ಮಿಕರ ರಕ್ಷಣೆ

Ravi Talawar
ಆಕಸ್ಮಿಕ ದಾಳಿ; ಬಾಲ ಕಾರ್ಮಿಕರ ರಕ್ಷಣೆ
WhatsApp Group Join Now
Telegram Group Join Now


ಬಳ್ಳಾರಿ,ಮೇ 15: ಸಿರುಗುಪ್ಪ ಪಟ್ಟಣದ ಆದೋನಿ ರಸ್ತೆಯ ಸಮೃಧ್ದಿ ಆಯಿಲ್ ಎಕ್ಸ್ಟ್ರಾಕ್ಷನ್ಸ್ ಕಾರ್ಖಾನೆಗೆ ಕಾರ್ಮಿಕ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ಬುಧವಾರ ಆಕಸ್ಮಿಕ ಭೇಟಿ ಮಾಡಿ ಪರಿವೀಕ್ಷಣೆ ನಡೆಸಿದಾಗ 07 ಬಾಲ ಹಾಗೂ ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬAದಿದ್ದು, ಎಲ್ಲಾ ಮಕ್ಕಳ ಮಾಹಿತಿ ಪಡೆದುಕೊಳ್ಳಲಾಗಿದೆ.

ಅದರಲ್ಲಿ 06 ಮಕ್ಕಳು ಓರಿಸ್ಸಾ ರಾಜ್ಯದಿಂದ ಬಂದಿರುವುದು ಕಂಡುಬAದಿದ್ದು, ಎಲ್ಲಾ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ಮಕ್ಕಳ ವಯಸ್ಸಿನ ದೃಢೀಕರಣ ದಾಖಲೆ ಹಾಗೂ ಮಾಲೀಕರ ದಾಖಲೆ ಪಡೆದು ಮಾಲೀಕರ ವಿರುದ್ಧ ಬಾಲ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂ

ದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ವರುಣ್, ಸಿರುಗುಪ್ಪ ಕಾರ್ಮಿಕ ನಿರೀಕ್ಷಕ ತಿರುಮಲೇಶ್, ಪೋಲಿಸ್ ಸಿಬ್ಬಂದಿ ಕೋರಿ ಬಸವರಾಜ್, ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯ ಸಿಬ್ಬಂದಿ ಗಿರೀಶ್ ಕಬಾಡಿ ಸೇರಿದಂತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

WhatsApp Group Join Now
Telegram Group Join Now
Share This Article