ಹಸಿರು ಕ್ರಾಂತಿ ವರದಿ, ಜಮಖಂಡಿ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಶೈಕ್ಷಣಿಕ ಜಾತಿಗಣತಿಗೆ ಉಪವಿಭಾಗ ಮಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ತಾಲೂಕು ಮಟ್ಟದ ಸಮೀತಿಗಳನ್ನು ರಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಿಭಾಗ ವ್ಯಾಪ್ತಿಯ ಜಮಖಂಡಿ, ರಬಕವಿ ಬನಹಟ್ಟಿ. ಮುಧೋಳ ಹಾಗೂ ಬೀಳಗಿ ತಾಲೂಕುಗಳಲ್ಲಿ ಸಮೀತಿಗಳನ್ನು ರಚಿಸಲಾಗಿದೆ. ೧೫೦ ಮನೆಗಳಿಗೆ ಒಬ್ಬರಂತೆ ಪ್ರಾಥಮಿಕ ಶಾಲಾಶಿಕ್ಷಕರನ್ನು ಸಮೀಕ್ಷಾ ದಾರರನ್ನಾಗಿ ನಿಯಮಿಸಲಾಗಿದೆ. ಮುಧೋಳ ತಾಲೂಕಿನಲ್ಲಿ ೫೯೦ ಸಮೀಕ್ಷಾದಾರರ ಅವಶ್ಯಕತೆ ಇದೆ. ಆಮಖಂಡಿ, ಹಾಗೂ ರಬಕವಿ ಬನಹಟ್ಟಿ ಎರಡು ತಾಲೂಕು ಸೇರಿಸಿ ೮೪೦ ಮತ್ತು ಬೀಳಗಿಯಲ್ಲಿ ೨೪೩ ಸಮೀಕ್ಷಾದಾರರು ಬೇಕಾಗುತ್ತದೆ. ೪೫ ಮಾಷ್ಟರ್ ಟ್ರೇನರ್‌ಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಸ್ಥಳೀಯ ಸಮೀಕ್ಷಾದಾರರಿಗೂ ನಿನ್ನೆಯ ವರೆಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಉಪವಿಭಾಗದಲ್ಲಿ ೩೦೦೦ ಗಣತಿದಾರರು ಕಾರ್ಯನಿರ್ವಹಿಸಲಿದ್ದಾರೆ. ಇಡಿಸಿಎಸ್ ಕಂಪನಿಯಿAದ ಸಿದ್ಧಪಡಿಸಿದ ತಂತ್ರಾAಶದ ಸಹಾಯ ದಿಂದ ಗಣತಿ ಕಾರ್ಯ ನಡೆಯಲಿದೆ. ಸೆ.೨೨ ರಿಂದ ಗಣತಿ ಕಾರ್ಯ ಪ್ರಾರಂಭವಾಗಲಿದೆ. ೧೫ ದಿನಗಳವರೆಗೆ ಗಣತಿ ಕಾರ್ಯನಡೆಯಲಿದ್ದು ನಂತರ ದತ್ತಾಂಶವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕು ಇದು ಜಾತಿ ಗಣತಿ ಅಲ್ಲ ಸಾಮಾಜಿಕ ಶೈಕ್ಷಣಿಕ ಗಣತಿಯಾಗಿದ್ದು ಇದರಿಂದ ಮಟ್ಟ ಗುರುತಿಸಲು ಸಹಕಾರಿ ಯಾಗಲಿದೆ. ಯಾವ ಕ್ಷೇತ್ರಗಳಲ್ಲಿ ಯಾವ ಅಭಿವೃದ್ಧಿ ಮಾಡಬೇಕು ಎಂಬುದು ಗೊತ್ತಾಗಲಿದೆ. ಒಂದು ಮನೆಗೆ ಗಣತಿದಾರರು ಭೇಟಿ ನೀಡಿದಾಗ ೬೦ ಪ್ರಶ್ನೆಗಳನ್ನು ಕೇಳುತ್ತಾರೆ. ಸಾರ್ವಜನಿಕರೆಲ್ಲರೂ ತಮಗೆ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಬೇಕು, ಯಾವುದೇ ಹಿಂಜರಿಕೆ ಪಡುವ ಅವಶ್ಯಕತೆಇಲ್ಲ ವಾಸ್ತವ ಅಂಶಗಳನ್ನು ಉತ್ತರಿಸುವದರಿಂದ ಸರ್ಕಾರಕ್ಕೆ ಖಚಿತವಾದ ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
ಕೆಇಬಿಯವರು ನೀಡಿರುವ ಆರ್‌ಆರ್ ಕೊಡ್‌ನಿಂದ ಮನೆಯ ಮಾಹಿತಿ ದೊರೆಯುತ್ತದೆ. ಹೊರತು ಅದರಿಂದ ವಿದ್ಯುತ್ ಬಿಲ್ ಬರುವದಿಲ್ಲ ಆದ್ದರಿಂದ ಸಾರ್ವಜನಿಕರು ಚೀಟಿಗಳನ್ನು ಕಿತ್ತಿಹಾಕುವ ಅವಶ್ಯಕತೆ ಇರುವದಿಲ್ಲ. ಗಾಬರಿ ಪಡಬೇಕಿಲ್ಲ ಎಂದು ಹೇಳಿದರು.