ಸಂಕೇಶ್ವರ: ಪಶ್ಚಿಮ ಘಟ್ಟಗಳಲ್ಲಿ ಕಳೆದ ಒಂದು ವಾರದಿಂದ ವಿಪರೀತ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿಯೂ ವರುಣಾಬ್ಬರ ಹೆಚ್ಚಿದೆ.
ಹಿರಣ್ಯಕೇಶಿ ನದಿಯ ಒಳಹರಿವು ಅಧಿಕವಾಗಿ ನದಿ ತೀರದ ಗ್ರಾಮಗಳಲ್ಲಿ ಸಹಜ ನೆರೆ ಭೀತಿ ಆವರಿಸಿದೆ. ಕೆಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯ್ಕ್, ಹುಕ್ಕೇರಿ ತಾಲೂಕಾ ತಹಸಿಲ್ದಾರ್ ಮಂಜುಳ ನಾಯಕ್, ಉಪ ತಹಶೀಲ್ದಾರ್ ಸಿ ಎ ಪಾಟೀಲ್ ಅವರು ಅಧಾಕಾರಿಗಳ ತಂಡದೊಂದಿಗೆ ನೆರೆ ಸ್ಥಿತಿ ನಿರ್ಮಾಣವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳೀಯರಿಗೆ ಸುರಕ್ಷಿತೆಯ ಸಲಹೆ, ಸೂಚನೆ, ನೀಡಿದರು.
ಶ್ರೀ ಶಂಕರ ಲಿಂಗ ಮಠಕ್ಕೆ ಭೇಟಿ ನೀಡಿದ ಅಧಿಕಾರಿಗಳು ಶಂಕರಾಚಾರ್ಯ ಮಹಾ ಸ್ವಾಮೀಜಿಗಳ ದರ್ಶನ ಪಡೆದರು. ನೆರೆ ಸ್ಥಿತಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಎ ಎಮ್ ಕಮತನುರಕರ, ಪುರಸಭೆ ಮುಖ್ಯ ಅಧಿಕಾರಿ ಪ್ರಕಾಶ್ ಮಠದ, ಸಂಕೇಶ್ವರ ಪೊಲೀಸ್ ಠಾಣೆ ಸಿಪಿಐ ಶಿವಶರಣ ಅಹುಜಾ, ಗ್ರಾಮ ಲೆಕ್ಕಾಧಿಕಾರಿ ಏನ್ ಆರ್ ಪಾಟೀಲ್ ಸಾಥ್ ನೀಡಿದರು.