ಇಂಡಿ ಪಟ್ಟಣದ ಎಸ್.ಜಿ.ಬಾಗವಾನ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ವಿಜಯಪುರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಎಸಿ ಅನುರಾಧಾ ವಸ್ತçದ ಮಾತನಾಡಿದರು.

Abushama Hawaldar
ಇಂಡಿ ಪಟ್ಟಣದ  ಎಸ್.ಜಿ.ಬಾಗವಾನ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ವಿಜಯಪುರ ಜಿಲ್ಲಾ ಮಟ್ಟದ  ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಎಸಿ ಅನುರಾಧಾ ವಸ್ತçದ ಮಾತನಾಡಿದರು.
WhatsApp Group Join Now
Telegram Group Join Now

ಇಂಡಿ : ಕ್ರೀಡೆಗೂ ಸಹ ಪಠ್ಯದಷ್ಟೇ ಮಹತ್ವ ಇದೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾದನೆ ಮೆರೆಯಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಎಸ್.ಜಿ.ಬಾಗವಾನ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ವಿಜಯಪುರ ಜಿಲ್ಲಾ ಮಟ್ಟದ ೧೪ ರಿಂದ ೧೭ ವರ್ಷ ವಯೋಮಾನದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಚಟುವಟಿಕೆಗಳು ದೈಹಿಕ ಚಟುವಟಿಕೆಗಳ ಜತೆಗೆ ಮಾನಸಿಕ ಆರೋಗ್ಯ ಉತ್ತಮ ಪಡಿಸಲಿದೆ. ಮನರಂಜನೆಯ ಜತೆಗೆ ದೈಹಿಕ ಆರೋಗ್ಯವು ಸಹಕಾರಿಯಾಗಲಿದೆ ಎಂದರು.
ಸo 

ಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ ಮಾತನಾಡಿ ಮಕ್ಕಳು ಪಾಠದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಪ್ರಾಥಮಿಕ ಹಂತದಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಡತೆ ಬೆಳೆಯಲಿದೆ ಎಂದರು.
ಒoದು ಕಾಲದಲ್ಲಿ ಕ್ರೀಡೆಗೆ ಅಷ್ಟು ಮಹತ್ವ ಇರಲಿಲ್ಲ. ಈಗ ಸರಕಾರಗಳು ಸಾಕಷ್ಟು ಅನುದಾನ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ . ಕಾರಣ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಟಗಳಲ್ಲಿ ಭಾಗವಹಿಸಬೇಕು ಎಂದರು.

ಕುಸ್ತಿ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಲು ಕೇಳಿಕೊಂಡರು..
ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಮುಜಾವರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಸ್.ಆರ್.ನಡಗಡ್ಡಿ, ಖತೀಬ ಇಂಡಿಕರ, ಮಹಿಬೂಬ ಬಳಗಾನೂರ, ಹಿರಿಯ ಪೈಲವಾನ ಹೈದರಸಾಬ ಮುಲ್ಲಾ ಹಾಗೂ ಅಮೀನ ಮುಲ್ಲಾ ಮಾತನಾಡಿದರು.
ಶಾಲೆಯ ಮುಖ್ಯ ಗುರುಗಳಾದ ರಾಜೇಂದ್ರ ಪವಾರ, ವಸೀಂ ಭೋಸಗೆ, ವೇದಿಕೆಯ ಮೇಲಿದ್ದರು.
ಎಸ್.ಎಸ್.ಹಚಡದ, ಎಚ್.ಎಂ. ಬಿಳವಾರ, ಟಿ.ಎಸ್.ಹೊಸಮನಿ, ಪ್ರಕಾಶ ಐರೋಡಗಿ, ವಾಯ್.ಟಿ.ಪಾಟೀಲ,ಎಚ್.ಕೆ.ಮಾಳಗೊಂಡ, ಶಂಕರ ಚವ್ಹಾಣ ಶಂಕರ ಕೋಳೆಕರ, ಎಸ್.ಡಿ.ಚವ್ಹಾಣ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article