ಇಂಡಿ : ದೇಶ ಹಾಗೂ ಸಂವಿಧಾನದ ರಕ್ಷಣೆಗಾಗಿ ಕಡ್ಡಾಯವಾಗಿ ನೈತಿಕ ಮತದಾನ ಮಾಡಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಡಾ|| ಬಾಬಾಸಾಹೇಬ ಅಂಬೇಡಕರ ಜನ್ಮ ದಿನಾಚರಣೆ ನಿಮಿತ್ಯ ಪುರಸಭೆ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯಕ್ರಮ ಮತ್ತು ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಶೇ ೧೦೦ ರಷ್ಟು ಮತದಾನದ ಗುರಿ ಹೊಂದಿದ್ದು ಮೇ.೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು.ಪ್ರಜಾಪ್ರಭುತ್ವದ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮತದಾರರು ಸಹಕರಿಸಬೇಕು. ಆ ಮೂಲಕ ದೇಶದ ಅಭಿವೃದ್ದಿಗೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದರು.
ತಾವು ಸ್ವತಃ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ|| ಬಾಬಾ ಸಾಹೇಬ ಅಂಬೇಡಕರ ಜಯಂತಿ ನಿಮಿತ್ಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾ.ಪA ಯೋಜನಾಧಿಕಾರಿ ನಂದೀಪ ರಾಠೋಡ,ತಹಸೀಲ್ದಾರ ಮಂಜುಳಾ ನಾಯಕ,ಐ.ಇ.ಸಿ ಸಂಯೋಜಕ ರಾಮಗೌಡ ಸರಬಡಗಿ ಮತ್ತಿತರಿದ್ದರು.