ನೇಸರಗಿ. ಗ್ರಾಮದ ಕಾಲ ಪ್ರೇಮಿ, ಶ್ರೀ ಕೃಷ್ಣ ಪಾರಿಜಾತದ ಪಾತ್ರದಾರಿ, ಮಾಜಿ ಬೈಲಹೊಂಗಲ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಮಲ್ಲಪ್ಪ. ಸತ್ತೇನ್ನವರ ಇವರಿಗೆ ಬಯಲಾಟ ಆಕೆಡಿಮೆಯು 2024-25 ನೇ ಸಾಲಿನ ವರ್ಷದ ಪ್ರಶಸ್ತಿ ಲಭಿಸಿದೆ. ಬರಮಣ್ಣ ಸತ್ತೇನ್ನವರ ಅವರು 1985 ರಿಂದ ಇಲ್ಲಿಯವರೆಗೆ ಎಲ್ಲ ಕಡೆಗಳಲ್ಲಿ ಶ್ರೀ ಕೃಷ್ಣ ಪಾರಿಜಾತ ಮತ್ತು ಭಜನಾ ಪದಗಳ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದು. ಗ್ರಾಮೀಣ ನಾಟಕೋತ್ಸವ ರಾಜ್ಯ ಮಟ್ಟದ ಜಾನಪದ ಪ್ರಶಸ್ತಿ, ಗಡಿ ಕನ್ನಡ ಸಾಂಸ್ಕೃತಿಕ ಸಂಭ್ರಮ ಪ್ರಶಸ್ತಿ, ಸಿರಿಗಂದ ಕಲಾ ಕಾರ್ತಿಕೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಅದಕ್ಕಾಗಿ ಇವರ ಕಲಾ ಸೇವೆ ಗುರುತಿಸಿ ಅಕಾಡಿಮೆಯು ವಾರ್ಷಿಕ ಪ್ರಶಸ್ತಿ ಘೋಷಿಸಿದೆ.