ಮುಡಾ ಹಗರಣದ ಎ1 ಆರೋಪಿ ಸಿಎಂಗಿಲ್ಲ ಲೋಕಾಯುಕ್ತ ಟೆನ್ಷನ್!

Ravi Talawar
ಮುಡಾ ಹಗರಣದ ಎ1 ಆರೋಪಿ ಸಿಎಂಗಿಲ್ಲ ಲೋಕಾಯುಕ್ತ ಟೆನ್ಷನ್!
WhatsApp Group Join Now
Telegram Group Join Now

ಮೈಸೂರು/ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದ ಬಳಿಕ ಕಳೆದ ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿತ್ತು. ಶನಿವಾರ, ಭಾನುವಾರ ಇದ್ದ ಕಾರಣ ಮೈಸೂರು ಲೋಕಾಯುಕ್ತ ಪೊಲೀಸರು ಇಂದಿನಿಂದ (ಸೆ.30) ತನಿಖೆ ಆರಂಭಿಸಿದ್ದಾರೆ.

ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್ ನೇತೃತ್ವದ ನಾಲ್ಕು ತನಿಖಾ ತಂಡಾ ಶನಿವಾರವೇ ಚೆಕ್‌ಲಿಸ್ಟ್ ರೆಡಿ ಮಾಡಿಕೊಂಡು ತನಿಖೆಗಿಳಿದಿದೆ. ಆರಂಭಿಕ ಹಂತದಲ್ಲಿ ದಾಖಲೆ ಸಂಗ್ರಹಕ್ಕೆ ಮುಂದಾಗಿದೆ. 59 ಭಾಗಗಳಾಗಿ ದಾಖಲೆಗಳನ್ನ ವಿಂಗಡಿಸಲಾಗಿದೆ.

ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರೋ 3ಎಕರೆ 16 ಗುಂಟೆ ಜಮೀನಿನ ಮೂಲ ದಾಖಲೆ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. 1935ರಿಂದ ಹಿಡಿದು, 2021ರವರೆಗೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಾಗೋವರೆಗೂ ಇರೋ ಡಾಕ್ಯೂಮೆಂಟ್ಸ್‌ಗಳನ್ನ ಕಲೆಹಾಕಲಾಗುತ್ತಿದೆ.

 

WhatsApp Group Join Now
Telegram Group Join Now
Share This Article