“ಗೃಹಲಕ್ಷ್ಮೀ” ಎಂಬ ಅರ್ಥಪೂರ್ಣ ಹೆಸರಿನ ಈ ಒಂದು ಯೋಜನೆಯು ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಹಬ್ಬಯಕೆಯಿಂದ ಅಧಿಕಾರದ ಗದ್ಧುಗೇರಿರಿರುವ ರಾಜ್ಯ ಕಾಂಗ್ರೆಸ್ (ಜೋಡೆತ್ತು) ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ, ಬಡ ಕುಟುಂಬಗಳ ಮಹಿಳಾಪರವಾದ ಯೋಜನೆಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಮಹಿಳಾಪರ ಅಲ್ಲದೇ ಬಡವರ ಪರವಾದ ಈ ಯೋಜನೆಯಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯಿಂದ ಅನೇಕ ಬಡ ಕುಟುಂಬಗಳ ಜೀವನಮಟ್ಟ ಸುಧಾರಿಸಿದೆ. ಅದೆಷ್ಟೋ ಬಡ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿದೆ, ಅನೇಕ ಬಡಜನರ ಬದುಕು ಹಸನಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.
ಸರ್ಕಾರದ ಇಂತಹದೊAದು ಮಹತ್ವಾಕಾಂಕ್ಷಿ ಹಾಗೂ ಮಹಿಳಾಪರ ಯೋಜನೆಯು ಹಲವು ಬಡ ಮಹಿಳೆಯರಿಗೆ ಆರ್ಥಿಕವಾಗಿ ಬಹಳ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಿಂದ ಬಡವರು ಅದರಲ್ಲೂ ಮನೆಯ ಗೃಹ ಲಕ್ಷಿö್ಮÃಯರೆನಿಸಿರುವ ಮಹಿಳೆಯರು ಹೊಸ ಹೊಸ ಕನಸುಗಳನ್ನು ಕಾಣುವಂತಾಗಿದೆ. ಈ ಗೃಹಲಕ್ಷ್ಮೀ ಯೋಜನೆಯಿಂದ ಬಡವರ ಅದರಲ್ಲೂ ವಿಶೇಷವಾಗಿ ಮನೆಯ ಗೃಹ ಲಕ್ಷಿö್ಮÃಯರೆನಿಸಿರುವ ಮಹಿಳೆಯರ ಚಿಕ್ಕಪುಟ್ಟ ಕನಸುಗಳು ನನಸಾಗಿವೆ. ಇದರಿಂದ ಅವರ ಮನೆ ಮನಗಳಲ್ಲಿ ಹರ್ಷದ ಹೊನಲು ಹರಿಯುವಂತಾಗಿದೆ.
ಮಹಿಳೆಯೊಬ್ಬರು ತಮಗೆ ಪ್ರತಿತಿಂಗಳು ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಖರ್ಚು ಮಾಡದೇ ಕೂಡಿಟ್ಟು ಈ ವರ್ಷದ ಯುಗಾದಿ ಹಬ್ಬದ ದಿನವೇ ಫ್ರಿಡ್ಜ್ ಖರೀದಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದೇ ಈ ಯೋಜನೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ. ಗೃಹಲಕ್ಷ್ಮೀ ಹಣ ಯಾವುದಕ್ಕೂ ಸಾಲೋದಿಲ್ಲ ಎಂದೆಲ್ಲಾ ಕೊಂಕು ಮಾತುಗಳನ್ನಾಡುವವರಿಗೆ ಈ ಮಹಿಳೆಯು ಮನಸ್ಸು ಮಾಡಿದರೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಏನೆಲ್ಲ ಖರೀದಿಸಬಹುದು ಎಂಬುದನ್ನೂ ಈ ಮೂಲಕ ತೋರಿಸಿಕೊಟ್ಟಿದ್ದಾರೆ.
ಗೃಹಲಕ್ಷ್ಮೀ ಫಲಾನುಭವಿಯಾಗಿರುವ ಹಾವೇರಿ ಜಿಲ್ಲೆಯ ಶಿಂಗ್ಗಾವಿ ಪಟ್ಟಣದ ಲತಾ ಎಂಬ ಹೆಸರಿನ ಮಹಿಳೆಯು ತಮಗೆ ಪ್ರತಿತಿಂಗಳು ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಖರ್ಚು ಮಾಡದೇ ಕೂಡಿಟ್ಟು ಈ ವರ್ಷದ ಯುಗಾದಿ ಹಬ್ಬದ ದಿನವೇ ಫ್ರಿಡ್ಜ್ ಖರೀದಿಸಿದ್ದಾರೆ. ಈ ಮೂಲಕ ಅವರು ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಹೇಗೆಲ್ಲಾ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕೆಲ ತಿಂಗಳುಗಳ ಹಿಂದಷ್ಟೇ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿ ಮಾಡಿದ್ದಾಗ, ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಫಲಾನುಭವಿಯಾಗಿದ್ದ ಈ ಮಹಿಳೆಯು ಯೋಜನೆ ಜಾರಿಯಾದಾಗಿನಿಂದಲೂ ತನಗೆ ಪ್ರತಿ ತಿಂಗಳು ಬರುತ್ತಿದ್ದ 2000 ರೂ. ಹಣ ಕೂಡಿಡುತ್ತ ಬಂದಿದ್ದರು. ಅಂದಿನಿAದ ಈ ವರ್ಷದ ಯುಗಾದಿ ಹಬ್ಬದವರೆಗೂ ಒಟ್ಟು ಸೇರಿಸಿ 17,500 ರೂಪಾಯಿ ಒಟ್ಟುಗೂಡಿಸಿ ಯುಗಾದಿ ಹಬ್ಬದ ದಿನವೇ 17,500 ಬೆಲೆಯ ಫ್ರಿಡ್ಜ್ ಖರೀದಿಸಿದ್ದಾರೆ. ಇದಕ್ಕೆ ಅನೇಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಈ ಬುದ್ಧಿಯನ್ನು ಹಲವರು ಕೊಂಡಾಡಿದ್ದಾರೆ.
ಅಷ್ಟೇ ಅಲ್ಲದೇ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಯುಗಾದಿ ಹಬ್ಬದ ದಿನವೇ ಫ್ರಿಡ್ಜ್ ಖರೀದಿಸಿದ ಬಳಿಕ ‘ಗೃಹಲಕ್ಷ್ಮೀ ಫಲಾನುಭವಿ’ ಎಂದು ಫ್ರಿಡ್ಜ್ಗೆ ಲಿಖಿತ ಫಲಕ ಹಾಕಿರುವ ಈ ಮಹಿಳೆಯು ಫ್ರಿಡ್ಜ್ ಮನೆಗೆ ತಂದು ಪೂಜೆ ಸಲ್ಲಿಸಿ ಬಳಕೆ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಇದೆಲ್ಲ ಒಂದೆಡೆಯಾದರೆ ಇತ್ತೀಚೆಗೆ ಕೆಲ ದಿನಗಳ ಹಿಂದಷ್ಟೇ ತನ್ನ ಮೃತ ಮಗನ ಅಂತ್ಯಸAಸ್ಕಾರದ ವೇಳೆ ‘ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 2 ಸಾವಿರ ರೂ. ಹಣ ಬರುತ್ತದೆ. ನನ್ನ ಜೀವನಕ್ಕೆ ಅದು ಸಾಕು’ ಎಂದು ಹರೆಯದ ತನ್ನ ಮಗನನ್ನು ಕಳೆದುಕೊಂಡ ವೃದ್ಧ ತಾಯಿಯೊಬ್ಬರು ಭಾವುಕರಾಗಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಕೆಲದಿನಗಳ ಹಿಂದೆ ಮೃತಪಟ್ಟಿದ್ದರು. ಇವರ ಅಂತ್ಯಸAಸ್ಕಾರದ ಸಂದರ್ಭದಲ್ಲಿ ವಿಶ್ವನಾಥ ಅವರ ತಾಯಿ ನೀಲವ್ವ ಅಳುತ್ತಲೇ ‘ಅಮ್ಮ ನೀನು ಬದುಕಲು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಬರುತ್ತದೆ ಬಿಡು’ ಎಂದು ಸಾಯುವುದಕ್ಕೂ ಮುನ್ನ ತನ್ನ ಮಗ ಹೇಳಿದ್ದನ್ನು ನೆನಪಿಸಿಕೊಂಡಿದ್ದರು.
ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿದ್ದಳು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸAಸ್ಕಾರ ನೇರವೇರಿಸಿದ್ದರು. ಅಂತ್ಯಸAಸ್ಕಾರ ವೇಳೆ ಗೃಹಲಕ್ಷ್ಮೀ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ ₹2000 ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು. ಅಂತ್ಯಸAಸ್ಕಾರ ಸಮಯದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಅರಣ್ಯ ರೋಧನದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಅಂತ್ಯಸAಸ್ಕಾರದಲ್ಲಿ ಪಾಲ್ಗೊಂಡಿದ್ದವರೊಬ್ಬರು ಇದನ್ನು ವಿಡಿಯೋ ಮಾಡಿದ್ದರು. ಬಳಿಕ ಆ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ನೀಲವ್ವ ಅವರ ಹೇಳಿಕೆಯಿಂದ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಮಹತ್ವ ಏನು ಎಂಬುದು ತಿಳಿಯುತ್ತದೆ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಜೋರಾಗಿಯೇ ನಡೆದಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸವದತ್ತಿ ತಹಸೀಲ್ದಾರ್ ಸೂಚನೆ ಮೇರೆಗೆ ಮರಕುಂಬಿ ಗ್ರಾಮದಲ್ಲಿ ನೀಲವ್ವ ಅವರು ವಾಸವಿದ್ದ ಮನೆಗೆ ಭೇಟಿ ನೀಡಿದ್ದ ಗ್ರಾಮ ಆಡಳಿತಾಧಿಕಾರಿ ದೀಪಾ ಎಸ್.ಕೊಪ್ಪಳ ಅವರು, ನೀಲವ್ವ ಅವರ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ನೀಲವ್ವ ಅವರು ತಮ್ಮನ್ನು ಪೋಷಿಸುತ್ತಿದ್ದ ಮಗ ಈಗ ಸಾವನ್ನಪ್ಪಿದ್ದಾನೆ. ತಮಗೆ ವಿಧವಾ ವೇತನ ದೊರೆಯುತ್ತಿದೆ. ಅದರ ಜತೆಗೆ ಈಗ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮಾಸಿಕ 2 ಸಾವಿರ ರು. ಸಹಾಯಧನವೂ ಸಿಗುತ್ತಿದೆ. ಅದರಲ್ಲಿಯೇ ಜೀವನ ಸಾಗಿಸಬೇಕಿದೆ ಎಂದು ತಿಳಿಸಿದ್ದರು.
ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋಧನೆ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನ ಮಿಡಿದು ವೈಯಕ್ತಿಯವಾಗಿ ಅವರೂ ಕೂಡ ವೃದ್ಧೆಗೆ ಧನ ಸಹಾಯ ಮಾಡಿದ್ದರು. ಇಂತಹದೊAದು ಅತ್ಯಂತ ಕರುಣಾಜನಕ ವಿಡಿಯೋವನ್ನು (ಸುದ್ಧಿಯನ್ನು) ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಅಂತ್ಯಸAಸ್ಕಾರ ಮುಗಿಸಿ ಸ್ವ ಗ್ರಾಮ ಮರಕುಂಬಿಗೆ ಹೋಗಿದ್ದ ತಾಯಿಯ ನೆರವಿಗೆ ಧಾವಿಸಿ ಆರ್ಥಿಕ ಸಹಾಯ ಮಾಡಿದ್ದರು. ಇದಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಅಲ್ಲದೇ ಒಂದು ವರ್ಷಕ್ಕೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಜಮಾ ಆಗುವ ಒಟ್ಟು ₹ 24 ಸಾವಿರ ಹಣದ ನೆರವಿನ ಹಸ್ತ ಚಾಚಿದ್ದರು. ತಮ್ಮ ಕಚೇರಿಯ ವಿಶೇಷ ಅಧಿಕಾರಿ ಜೆ.ಬಿ.ಬಾಗೋಜಿಕೊಪ್ಪ ಅವರ ಮೂಲಕ ಹಣ ಮಹಿಳೆಯ ಮನೆಗೆ ಕಳುಹಿಸಿದ್ದರು. ಅಲ್ಲದೇ ಇದಕ್ಕೂ ನೊಂದ ತಾಯಿಯೊಂದಿಗೆ ಕರೆ ಮೂಲಕ ಮಾತನಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಾಂತ್ವಾನದ ಜತೆಗೆ ಆತ್ಮಸ್ಥೈರ್ಯವನ್ನು ತುಂಬಿ ಸದಾಕಾಲವೂ ತಾಯಿಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದ್ದರು.
ಅದರಂತೆ ನುಡಿದಂತೆ ನಡೆದ ಲಕ್ಷ್ಮೀ ಹೆಬ್ಬಾಳಕರ ಅವರು ಮನೆಯ ಆಸರೆಯಾಗಿದ್ದ ಹರೆಯದ ಮಗನನ್ನು ಕಳೆದು ಕೊಂಡ ವೃದ್ಧ ತಾಯಿ ಜೀವಕ್ಕೆ ನೆರವಾಗಲೆಂಬ ಉದ್ದೇಶದಿಂದ ಒಂದು ವರ್ಷಕ್ಕೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಜಮಾ ಆಗುವ ಒಟ್ಟು ₹ 24 ಸಾವಿರ ಹಣದ ನೆರವಿನ ಹಸ್ತ ಚಾಚಿದ್ದರು. ತಮ್ಮ ಕಚೇರಿಯ ವಿಶೇಷ ಅಧಿಕಾರಿ ಜೆ.ಬಿ.ಬಾಗೋಜಿಕೊಪ್ಪ ಅವರ ಮೂಲಕ ಹಣ ಮಹಿಳೆಯ ಮನೆಗೆ ಕಳುಹಿಸಿದ್ದರು.
ಒಟ್ಟಿನಲ್ಲಿ “ಗೃಹಲಕ್ಷ್ಮೀ” ಎಂಬ ಯೋಜನೆಯು ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ (ಜೋಡೆತ್ತು) ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ, ಬಡ ಕುಟುಂಬಗಳ ಮಹಿಳಾಪರವಾದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾಗಿದ್ದು, ಮಹಿಳಾಪರ ಅಲ್ಲದೇ ಬಡವರ ಪರವಾದ ಈ ಯೋಜನೆಯಿಂದ ಅನೇಕ ಬಡ ಕುಟುಂಬಗಳ ಜೀವನಮಟ್ಟ ಬಹಳ ಸುಧಾರಿಸಿದೆ. ಅದೆಷ್ಟೋ ಬಡ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿದೆ, ಅನೇಕ ಬಡಜನರ ಅದರಲ್ಲೂ ಮಹಿಳೆಯರ ಬದುಕು ಹಸನಾಗಿದೆ ಎಂದು ಹಲವರು ಬಣ್ಣಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ (ಜೋಡೆತ್ತು) ಸರ್ಕಾರದ ಇಂತಹದೊAದು ಮಹತ್ವಾಕಾಂಕ್ಷಿ ಹಾಗೂ ಮಹಿಳಾಪರ ಯೋಜನೆಯು ಹಲವು ಬಡ ಮಹಿಳೆಯರಿಗೆ ಆರ್ಥಿಕವಾಗಿ ಬಹಳ ಸಹಕಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಿಂದ ಬಡವರು ಅದರಲ್ಲೂ ಮನೆಯ ಗೃಹ ಲಕ್ಷಿö್ಮÃಯರೆನಿಸಿಕೊಂಡಿರುವ ಮಹಿಳೆಯರು ಹೊಸ ಹೊಸ ಕನಸುಗಳನ್ನು ಕಾಣುವಂತಾಗಿದೆ. ಅಲ್ಲದೇ ಮಹಿಳೆಯರ ಚಿಕ್ಕಪುಟ್ಟ ಕನಸುಗಳು ನನಸಾಗಿವೆ. ಇದರಿಂದ ಅದೆಷ್ಟೋ ಜನರ ಮನೆ ಮನಗಳಲ್ಲಿ ಹರ್ಷದ ಹೊನಲು ಹರಿಯುವಂತಾಗಿದೆ ಎಂದೂ ಅನೇಕರು ಶ್ಲಾಘಿಸಿದ್ದಾರೆ.
-ಮಂಜುನಾಥ.ಎಸ್. ಕಟ್ಟಿಮನಿ
ಹವ್ಯಾಸಿ ಪತ್ರಕರ್ತ ಹಾಗೂ ಲೇಖಕ
ವಿಜಯಪುರ
ಹವ್ಯಾಸಿ ಪತ್ರಕರ್ತ ಹಾಗೂ ಲೇಖಕ
ವಿಜಯಪುರ