ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗವು ಡಿಸೆಂಬರ್ 15-16 ರಂದು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಎಂಬ ವಿಷಯದ ಎರೆಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ತಿಳಿಸಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ವಿಚಾರ ಸಂಕಿರಣವನ್ನು ಇಂಟರ್ ನ್ಯಾಶನಲ್ ಆನ್ ರೆಸ್ಪಾನ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಪಿ.ಎಮ್.ಉಷಾ ಯೋಜನೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದ ಅವರು ಈ ವಿಚಾರ ಸಂಕಿರಣಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಇರುವ ಪರಿಣಿತರಿಂದ ಮತ್ತು ಸಂಶೋಧಕರಿಂದ 300 ರಲ್ಲಿ ಸಂಶೋಧನಾ ಲೇಖನಗಳು ಸ್ವೀಕೃತಿಯಾಗಿವೆ. ಅದರಲ್ಲಿ 47 ಸಂಶೋಧನಾ ಲೇಖನಗಳ ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಲಾಗುವದು ಎಂದರು.
ಹೈಬ್ರೀಡ್ ಮಾದರಿ ವಿಚಾರ ಸಂಕಿರಣ:
ಇದು ಹೈಬ್ರೀಡ್ ಮಾದರಿ ವಿಚಾರ ಸಂಕಿರಣವಾಗಿ ಐದು ವಿಶ್ವವಿದ್ಯಾಲಯಗಳು ಪರಿಣಿತರು ಭಾಗವಹಿಸಲಿದ್ದಾರೆ. ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಸಂಶೋಧನೆ ಬಹಳ ಮಹತ್ವದಾಗಿದೆ ಎಂದರು. ಈ ವಿಚಾರ ಸಂಕಿರಣದಲ್ಲಿ ಪ್ರಸ್ತುತ ಪಡಿಸಿದ ರಿಸರ್ಚ್ ಪೇಪರಗಳನ್ನು ಪ್ರತಿಷ್ಠಿತ ಸ್ಪ್ರಿಂಜರ್ ಸಂಶೋಧನಾ ನಿಯತಕಾಲಿಕೆಯಲ್ಲಿ ಆಯ್ಕೆಗೊಂಡ ಲೇಖನಗಳನ್ನು ಪ್ರಕಟಮಾಡಲಾಗುವುದು ಎಂದರು.
ವಿವಿ ಪಠ್ಯಕ್ರಮದಲ್ಲಿ ಎಐ ಕಲಿಕೆಗೆ ಮಹತ್ವ :
ಮಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಹೊಸ ಕೋರ್ಸುಗಳನ್ನು ಪರಿಚಯಿಸಲಾಗುವದು ಅದರಲ್ಲಿ ಸೈಬರ್ ಸೆಕ್ಯುರಿಟಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್, ವಿಷಯಗಳಾಗಿವೆ ಎಂದರು.
ಸಾಂಪ್ರದಾಯಿಕ ಕೋರ್ಸುಗಳಿಗೆ ಆಧುನಿಕ ಸ್ಪರ್ಶ ನೀಡಲಾಗುವುದು ಕಲೆ ವಿಜ್ಞಾನ ಮತ್ತು ವಾಣಿಜ್ಯ ಮತ್ತು ವ್ಯವಹಾರ ಬಿಬಿಎ. ಬಿಸಿಎ,ವಿಷಯಗಳಿಗೆ ಪೂರಕವಾಗಿ ಕೃತಕ ಬುದ್ಧಿಮತ್ತೆ ವಿಷಯದ ಕೌಶಲಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶ ಇದೆ ಎಂದರು. ಸದ್ಯ ಇರುವ ವಿಷಯಗಳಿಗೆ ತಂತ್ರಜ್ಞಾನದ ಹೊಸತನದ ಮೂಲಕ ಪಠ್ಯಕ್ರಮದಲ್ಲಿ ಕೊಂಚಮಟ್ಟಿಗೆ ಬದಲಾವಣೆ ಮಾಡುವುದು ಇದರಿಂದ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ತಕ್ಷಣ ಕೆಲಸ ಸಿಗುವಂತೆ ಮಾಡುವ ಇದರ ಹಿಂದಿನ ಉದ್ದೇಶವಾಗಿದ್ದು ಉದ್ಯೋಗ ಆಧಾರಿತ ಕೋರ್ಸುಗಳನ್ನು ಪರಿಚಯಿಸಲಾಗುವುದು ಎಂದರು.
ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ:
ಡಿಸೆಂಬರ್ 15 ರಂದು ಬೆಳಿಗ್ಗೆ 9:00 ಕ್ಕೆ ಕರ್ನಾಟಕ ವಿಧಾನ ಸಭಾ ಸಭಾಪತಿಗಳಾದ ಯು.ಟಿ.ಖಾದರ ಫರೀದ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಮಂಡಳಿಯ ಚೇರಮನ್ ಪ್ರೊ. ಎಸ್.ಆರ್.ನಿರಂಜನ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮಾ, ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಬಿ.ಡಿ ಕುಂಬಾರ, ಭಾಗವಹಿಸಲಿದ್ದಾರೆ. ಧಾರವಾಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಸ್.ಆರ್.ಮಹದೇವ ಪ್ರಸಾದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಡಿಸೆಂಬರ್ 15 ಮತ್ತು 16ರಂದು ಭೌತಿಕ ಮಯ ಆನ್ಲೈನ್ ವಿವಿಧ ಐದು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ ಎಂದರು. ಈ ವಿಚಾರ ಸಂಕಿರಣದಲ್ಲಿ ಕ್ಯಾರ್ಡಿಫ್ ಮೇಟ್ರೋಪಾಲಟಿಯನ್ ಯುನಿವರ್ಸಿಟಿ, ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜು, ಕೆ.ಎಲ್.ಈ ಟೆಕ್, ಯುನಿವರ್ಸಿಟಿ ಆಫ್ ವೇಲ್ಸ್, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಭಾಗವಹಿಸುವವರು ಎಂದರು.
ಸಮಾರೋಪ : ಡಿಸೆಂಬರ್ 16 ರಂದು ಸಂಜೆ 5:00 ಗಂಟೆಗೆ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬೆಳಗಾವಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಮ್.ತ್ಯಾಗರಾಜ ಸಮಾರೋಪ ಭಾಷಣ ಮಾಡಲಿದ್ದಾರೆ. ಇಂಗ್ಲೆಂಡಿನ ಕ್ಯಾರ್ಡಿಫ್ ವಿಶ್ವವಿದ್ಯಾಲಯ ಡಾಟಾ.ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಅಂಗೇಶ್ ಅನುಪಮ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಣಕ ವಿಜ್ಞಾನ ವಿಭಾಗದ ಪ್ರೊ. ಈಶ್ವರ ಬೈದಾರಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಸಂಜಯಕುಮಾರ ಮಾಲಗತ್ತಿ, ಡಾ.ಪ್ರಭಾಕರ ಕಾಂಬಳೆ, ಸೇರಿದಂತೆ ಇತರರು ಇದ್ದರು.


