ನೇಸರಗಿ.ಮಹಿಳೆಯರು ತಮ್ಮ ಅಡುಗೆ ಮನೆ ಕಾರ್ಯದ ಬಹುಮುಖ್ಯ ಅಂಗ ಸಿಲಿಂಡರ ಬಳಕೆಯಲ್ಲಿ ಅನಿಲ ಸೋರಿ ಬೆಂಕಿ ಹತ್ತಿದಾಗ ಮಹಿಳೆಯರು ಮಾಡಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ಬೈಲಹೊಂಗಲ ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರದಂದು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಯೋಜನೆ ಇವರ ಸಹಯೋಗದಲ್ಲಿ ಸಮೀಪದ ವನ್ನೂರು ಹಣಬರಹಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಮತ್ತು ಸಂಕಲ್ಪ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಅಧ್ಯಯನ ಜಾಗ್ರತಿ ಶಿಬಿರ,ಎಲ್ಲ ವಿಭಾಗಗಳ ಅಧ್ಯಯನ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜೆ. ಇವರು ಸದಸ್ಯರಿಗೆ ಆರೋಗ್ಯ ರಕ್ಷಾ ನೆಟ್ವರ್ಕ್ ಆಸ್ಪತ್ರೆಯಾದ ಇಶಾ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ರಕ್ಷಾ ಸೌಲಭ್ಯಗಳ ಬಗ್ಗೆ ಮತ್ತು ಆಸ್ಪತ್ರೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ,ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳೆಯರಿಗಾಗಿ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ,ತಾಲೂಕಿನ ಕೋರ್ಟ್ ಭೇಟಿ ಮಾಡಿ ಮಹಿಳಾ ಹಕ್ಕುಗಳ ಮತ್ತು ಕಾನೂನುಗಳ ಬಗ್ಗೆ ಮಾಹಿತಿ, ಸ್ವ ಉದ್ಯೋಗ ಘಟಕ ಭೇಟಿ ಮಾಡಿ ಜೀರೋದಿಂದ ಪ್ರಾರಂಭವಾದ ಚಿಗಳಿ ಪೇಪರ್ ಬ್ಯಾಗ್, ಚನುಮರಿ ವ್ಯಾಪಾರಗಳ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಆಶಾ, ಗೀತಾ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಈ ದಿನ ತಾಲೂಕು ಅಧ್ಯಯನ ಪ್ರವಾಸ ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಯಿತು.